Recent Posts

Tuesday, January 21, 2025
ಸುದ್ದಿ

ಭಾರತೀಯ ಪೈಲೆಟ್‍ಗಳನ್ನು ಹಾಡಿಹೊಗಳಿದ ಫ್ರಾನ್ಸ್ ವಾಯುಪಡೆಯ ಮುಖ್ಯಸ್ಥ – ಕಹಳೆ ನ್ಯೂಸ್

ಫ್ರಾನ್ಸ್: ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನ ರಫೇಲ್ ಫೈಟರ್ ಜೆಟ್‍ಗಳನ್ನು ಭಾರತದ ಪೈಲೆಟ್‍ಗಳು ಅತ್ಯಂತ ಅದ್ಭುತವಾಗಿ ಚಾಲನೆ ಮಾಡಿದ್ದಾರೆ ಎಂದು ಫ್ರಾನ್ಸ್ ಪ್ರಶಂಸೆಯನ್ನು ವ್ಯಕ್ತಪಡಿಸಿದೆ. ಫ್ರಾನ್ಸ್ ನ ಮೊಂಟ್-ಡಿ-ಮರ್ಸನ್ ವಾಯು ನೆಲೆಯಲ್ಲಿ ಜು. 1ರಿಂದ 12ರವರೆಗೆ ನಡೆದ ಭಾರತ-ಫ್ರಾನ್ಸ್ ಯುದ್ಧಾಭ್ಯಾಸದ ಗರುಡಾ-6ನಲ್ಲಿ ಭಾರತದ ಪೈಲೆಟ್‍ಗಳು ರಫೇಲ್ ಜೆಟ್ ವಿಮಾನಗಳನ್ನು ಯಶಸ್ವಿಯಾಗಿ ಹಾರಾಟ ನಡೆಸಿ ನಿರ್ದಿಷ್ಟ ಕಾರ್ಯಾಚರಣೆ ಪೂರ್ಣಗೊಳಿಸಿದರು.

ಭಾರತ ಪೈಲೆಟ್‍ಗಳು ಈ ಕಾರ್ಯವನ್ನು ಫ್ರಾನ್ಸ್ ವಾಯುಪಡೆಯ ಮುಖ್ಯಸ್ಥ ಜನರಲ್ ಫಿಲಿಪ್ ಲಿವಿಗ್ನ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಭಾರತೀಯ ಪೈಲೆಟ್‍ಗಳು ಅತ್ಯಂತ ಸಮರ್ಥವಾಗಿ ರಫೇಲ್ ಪೈಲೆಟ್‍ಗಳನ್ನು ಚಾಲನೆ ಮಾಡಿದ್ದಾರೆ. ಇವರ ಹಾರಾಟ ವೈಖರಿ ಅದ್ಭುತವಾಗಿತ್ತು. ಈ ವಿಮಾನ ಚಾಲನೆಯಲ್ಲಿ ಅತ್ಯಂತ ಅನುಭವಿಗಳಂತೆ ಇವರು ಹಾರಾಟ ನಡೆಸಿದರು. ಇದೂ ನನಗೆ ಅಪಾರ ಸಂತಸ ನೀಡಿದೆ ಎಂದು ಜನರಲ್ ಫಿಲಿಪ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮರಾಭ್ಯಾಸದಲ್ಲಿ ಪಾಲ್ಗೊಂಡ ಭಾರತೀಯ ಪೈಲೆಟ್‍ಗಳು ಒಟ್ಟು 400 ಗಂಟೆಗಳ ಹಾರಾಟ ನಡೆಸಿದರು. ಇದರಲ್ಲಿ 100 ಗಂಟೆಗಳು ಭಾರತೀಯ ಯುದ್ಧ ವಿಮಾನಗಳ ಹಾರಾಟಕ್ಕೆ ಮೀಸಲಾಗಿತ್ತು ಉಳಿದ 300 ಗಂಟೆಗಳನ್ನು ಫ್ರಾನ್ಸ್ ಫೈಟರ್ ಜೆಟ್‍ಗಳ ವಿಮಾನ ಹಾರಾಟಕ್ಕೆ ಬಳಸಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ-ಫ್ರಾನ್ಸ್ ನಡುವೆ ಕಳೆದ 5 ವರ್ಷಗಳಿಂದ ಗರುಡಾ ಹೆಸರಿನ ಸಮರಾಭ್ಯಾಸ ನಡೆಯುತ್ತಿದೆ. ನಿನ್ನೆಯಷ್ಟೇ ಮುಕ್ತಾಯಗೊಂಡು ಯುದ್ಧ ತಾಲೀಮು 6 ನೇ ಆವೃತ್ತಿಯದ್ದಾಗಿದೆ. ಎರಡು ದೇಶಗಳ ವಾಯುಪಡೆ, ನೌಕಾದಳ ಮತ್ತು ಭೂ ಸೇನೆ ಸಿಬ್ಬಂದಿ ಈ ತಾಲೀಮಿನಲ್ಲಿ ಪಾಲ್ಗೊಂಡು ತಮ್ಮ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಿ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.