Highlights
ಕಲ್ಲಡ್ಕ ಅವರದ್ದು ಖಾಸಗಿ ಶಾಲೆ, ಸರ್ಕಾರಿ ಶಾಲೆ ಅಲ್ಲ, ಅನುದಾನಿತವೂ ಅಲ್ಲ, ಅವರಿಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು ? ಸಿಎಂ ಪ್ರಶ್ನಿಸಿದ್ದಾರೆ.
ಬೆಂಗಳೂರು : ಕಲ್ಲಡ್ಕ ಅವರದ್ದು ಖಾಸಗಿ ಶಾಲೆ, ಸರ್ಕಾರಿ ಶಾಲೆ ಅಲ್ಲ, ಅನುದಾನಿತವೂ ಅಲ್ಲ, ಅವರಿಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು ? ಸಿಎಂ ಪ್ರಶ್ನಿಸಿದ್ದಾರೆ.
ಏನಿದು ವಿಚಾರ?
ಆರ್’ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಒಡೆತನದ ಶಾಲೆಗಳಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಪ್ರಭಾಕರ್ ಭಟ್ ಒಡೆತನದ ಶಾಲೆಗಳಾದ ಶ್ರೀರಾಮಕೇಂದ್ರ, ಶ್ರೀದೇವಿ ವಿದ್ಯಾಕೇಂದ್ರದ ದತ್ತು ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.
ಈ ವಿದ್ಯಾಸಂಸ್ಥೆಗಳನ್ನು ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವತಿಯಿಂದ ಕಲ್ಲಡ್ಕ ಪ್ರಭಾಕರ್ ಭಟ್ ದತ್ತು ಪಡೆದಿದ್ದರು. ಆದರೀಗ ಹಿಂದೂ ಧಾರ್ಮಿಕ ದತ್ತಿ ಅಧಿನಿಯಮದಂತೆ ಖಾಸಗಿ ಶಾಲೆ ದತ್ತು ಪಡೆಯಲು ಅಧಿಕಾರವಿಲ್ಲ. ನಿಯಮದ ಪ್ರಕಾರ ದೇವಸ್ಥಾನಕ್ಕೆ ನಷ್ಟ ಆಗುತ್ತೆ ಅನ್ನೋ ಕಾರಣ ನೀಡಿರುವ ರಾಜ್ಯ ಸರ್ಕಾರ ಈ ದತ್ತು ಆದೇಶವನ್ನು ರದ್ದುಗೊಳಿಸಿದೆ.
ಇನ್ನು ಇಂದು ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಊಟ ಪೂರೈಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಿಎಂ, ಈ ವಿಷಯ ನಂಗೆ ಗೊತ್ತಿಲ್ಲ, ಎಲ್ಲಿಂದ ತಂದರೂ ಊಟ ಊಟವೇ ಎಂದಿದ್ದಾರೆ.