Wednesday, January 22, 2025
ಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಹೆಣ್ಣುಮಕ್ಕಳ ಸುರಕ್ಷಾ ಕಾರ್ಯಕ್ರಮ” – ಕಹಳೆ ನ್ಯೂಸ್

ದಿನಾಂಕ 13/07/2019 ಎಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಹೆಣ್ಣುಮಕ್ಕಳ ಸುರಕ್ಷಾ ಕಾರ್ಯಕ್ರಮ” ನಡೆಯಿತು.

ಮಾತೃಭಾರತಿ ಸಮಿತಿಯ ಸದಸ್ಯರಾದ ಮಮತಾ ಮಾತಾಜಿಯವರು ಮಾತನಾಡಿ ಹೆಣ್ಣು ಮಕ್ಕಳು ತಮ್ಮ ಪೌಢಾವಸ್ಥೆಗೆ ಬಂದಾಗ ದೇಹದಲ್ಲಿ ಉಂಟಾಗುವ ಬದಲಾವಣೆ, ದೈಹಿಕ ಹಾಗೂ ಮಾನಸಿಕ ಸ್ವಚ್ಛತೆ, ಅಪರಿಚಿತರೊಂದಿಗೆ ತಮ್ಮ ವರ್ತನೆ, ಮಾನಸಿಕ ನಿಯಂತ್ರಣದೊಂದಿಗೆ ಹೆಣ್ಣುಮಕ್ಕಳ ಸಮಸ್ಯೆಯ ಪರಿಹಾರದ ಬಗ್ಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಣ್ಣುಮಕ್ಕಳ ಸುರಕ್ಷೆಯ ನಿಟ್ಟಿನಲ್ಲಿ ಶಾಲೆಯ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಸುರಕ್ಷಾ ಸಮಿತಿಯನ್ನು ರಚಿಸಲಾಯಿತು.

ವೇದಿಕೆಯಲ್ಲಿ ಮಾತೃಭಾರತಿಯ ಸದಸ್ಯರು, ಮತ್ತುಪೋಷಕರಾದ ಮಮತಾ ಎಸ್ ಶೆಟ್ಟಿ, ರಾಜೀವಿ, ಸ್ವಾತಿ, ಸಂಧ್ಯಾರಾಣಿ ಮತ್ತು ಪವಿತ್ರರವರು ಉಪಸ್ಥಿತಿಯಿದ್ದರು.

ಕಾರ್ಯಕ್ರಮವನ್ನು ಶಿಕ್ಷಕರಾದ ಶಶಿಕಲಾ ನಿರೂಪಿಸಿ, ಅನ್ನಪೂರ್ಣ ಸ್ವಾಗತಿಸಿ ವಂದಿಸಿದರು.