Tuesday, January 21, 2025
ಸುದ್ದಿ

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ವಿದ್ಯಾಲಯದಲ್ಲಿ ಯುವರ್ ಮೈಂಡ್, ಯುವರ್ ಜಾಬ್ ಉದ್ಯೋಗ ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ವಿದ್ಯಾಲಯದಲ್ಲಿ, ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಯುವರ್ ಮೈಂಡ್, ಯುವರ್ ಜಾಬ್ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ, ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲ್ ತಮ್ಮ ತರಬೇತಿಯಲ್ಲಿ ‘ಆಧುನಿಕ ಜಗತ್ತು ಸ್ಪರ್ಧಾತ್ಮಕವಾಗಿದೆ. ಕಾರ್ಯಕೌಶಲ, ವಿಕಾಸಗೊಂಡ ಕ್ರಿಯಾಶೀಲ ವ್ಯಕ್ತಿತ್ವಗಳಿಗೆ ಮಾತ್ರ ಬೆಲೆ ಹಾಗು ಬೇಡಿಕೆ ಇರುತ್ತದೆ’ ಎಂದು ತಿಳಿಸಿದರು. ಒಬ್ಬ ಉದ್ಯೋಗ ಆಕಾಂಕ್ಷಿಗೆ ಇರಬೇಕಾದ ವಿವಿಧ ಕೌಶಲಗಳ ಬಗ್ಗೆ, ಅಂತರ್ಜಾಲ ಮೂಲಕ ಕಲಿಕೆ ಮಾಡುವ ವಿಧಾನ ಗಳ ಬಗ್ಗೆ ಮಾಹಿತಿಯನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಯೋಜನಾಧಿಕಾರಿ ಸತೀಶ್ ಜಿ.ಆರ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಗಣರಾಜ ಕುಂಬಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲ ಸತೀಶ್ ಭಟ್ , ಉಪನ್ಯಾಸಕ ನವೀನ್ ಮತ್ತು ದೇವಿಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು