Recent Posts

Sunday, January 19, 2025
ಸುದ್ದಿ

ನಿಲ್ಲದ ಕೋಮು ಸಂಘರ್ಷ | ಸುರತ್ಕಲ್ ನಲ್ಲೇ ಹಿಂಜಾವೇ ಸಹ ಸಂಚಾಲಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

 

ಮಂಗಳೂರು : ಸುರತ್ಕಲ್ ನ ಅಗರವೇಲು ಬಳಿ ಸೋಮವಾರ ರಾತ್ರಿ 7.30 ರ ಸುಮಾರಿಗೆ ಮತ್ತೊಂದು ತಲುವಾರು ದಾಳಿ ನಡೆದಿದೆ. ದಾರಿಯಲ್ಲಿ ಬರುತ್ತಿದ್ದ ಮೇಲೆ ಹೊಂಚು ಹಾಕಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸುರತ್ಕಲ್ ನ ಹಿಂಜಾವೇ ಸಹ ಸಂಚಾಲಕ ಭರತ್ ಎಂಬವರ ಮೇಲೆ ಈ ದಾಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈಕಿನಲ್ಲಿ ಮನೆಯ ಕಡೆ ಹೋಗುತ್ತಿದ್ದ ಸಂದರ್ಭ ದಲ್ಲಿ ದಾರಿ ಮಧ್ಯ ಪೊದೆಯೊಳಗೆ ಅಡಗಿ ಕುಳಿತಿದ್ದ ದುಷ್ಕರ್ಮಿಗಳು ಭರತ್ ರನ್ನು ಅಡ್ಡ ಗಟ್ಟಿ ತಲುವಾರಿನಿಂದ‌ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬೈಕನ್ನು ಅಲ್ಲಿಯೇ ಬಿಟ್ಟು ಸ್ವಲ್ಪ ದೂರ ಓಡಿ ಹೋಗಿದ್ದಾರೆ‌. ಸ್ವಲ್ಪದರಲ್ಲೇ ಭಾರೀ ಅನಾಹುತವೊಂದರಿಂದ ಪಾರಾಗಿದ್ದಾರೆ. ಈ ದಾಳಿಯಿಂದ ಸುರತ್ಕಲ್ ನ ಜನತೆಯಲ್ಲಿ ಮತ್ತೊಮ್ಮೆ ಆತಂಕದ ಛಾಯೆ ಮೂಡಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response