Tuesday, January 21, 2025
ಸಿನಿಮಾ

ಮಾಲಿವುಡ್‍ನಲ್ಲಿ ಸೌಂಡ್ ಮಾಡ್ತಾ ಇದೆ ‘ತನ್ನೀರ್‌ಮತ್ತನ್ ದಿನಂಙಳ್’ – ಕಹಳೆ ನ್ಯೂಸ್

ಮೊನ್ನೆ ತಾನೆ ನಟ, ನಿರ್ದೇಶಕ, ಗಾಯಕ ವಿನೀತ್ ಶ್ರೀನಿವಾಸನ್, ‘ಕುಂಬಳಂಗಿ ನೈಟ್’ ಖ್ಯಾತಿಯ ನಟ ಮ್ಯಾಥ್ಯೂ ಥಾಮಸ್ ಹಾಗೂ ಉಪ್ಪುಮ್ ಮೊಳಗುಮ್ ಧಾರವಾಹಿ ಖ್ಯಾತಿಯ ನಟಿ ನಿಶಾ ಸಾರಂಗ್ ಅಭಿನಯದ ‘ತನ್ನೀರ್‌ಮತ್ತನ್ ದಿನಂಙಳ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರೈಲರ್ ವೀಕ್ಷಿಸಿದ ಸಿನಿರಸಿಕರು ಚಿತ್ರದ ಮೇಲೆ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಚಿತ್ರದ ಮೊದಲ ವೀಡಿಯೋ ಸಾಂಗ್ ನೋಡಿದ ಮೇಲೆ, ಈ ಚಿತ್ರವನ್ನು ಮೊದಲ ದಿನ, ಮೊದಲ ಶೋ ನೋಡಬೇಕೆಂದು ನಿರ್ಧರಿಸಿದ್ದಾರೆ ಪ್ರೇಕ್ಷಕರು. ಕಾರಣ ಚಿತ್ರದ ಕ್ವಾಲಿಟಿ ಮೇಕಿಂಗ್. ಮನಸೂರೆಗೊಳುವ ಛಾಯಾಗ್ರಹಣ, ವಿನೀತ್ ಶ್ರೀನಿವಾಸನ್ ಅವರ ವಿಭಿನ್ನ ಅಭಿನಯ ಮತ್ತು ಮುಖ್ಯವಾಗಿ ಮ್ಯಾಥ್ಯೂ ಥಾಮಸ್ ಮತ್ತು ಅನಸ್ವರ ರಾಜನ್ ಅವರ ಲವ್ ಕೆಮೆಸ್ಟ್ರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟಕ್ಕೂ ‘ತನ್ನೀರ್‌ಮತ್ತನ್ ದಿನಂಙಳ್’ ಅಂದ್ರೆ.. ಕಲ್ಲಂಗಡಿ ದಿನಗಳು ಎಂದು. ಚಿತ್ರಕ್ಕೂ ಶೀರ್ಷಿಕೆಗೂ ಏನು ಸಂಬಂಧ ಅಂದ್ರೆ. ಇದೊಂದು ಸಾಂಕೇತಿಕವಾದ ಶೀರ್ಷಿಕೆ. ಟ್ರೈಲರ್ ನೋಡಿದ್ರೆ ಅರ್ಥವಾಗುತ್ತೆ.

‘ತನ್ನೀರ್‌ಮತ್ತನ್ ದಿನಂಙಳ್’ ಶೀಘ್ರವೇ ಪ್ರಪಂಚದಾದ್ಯಂತ ತೆರೆಗಪ್ಪಳಿಸಲಿದ್ದು. ವರ್ಷಾಂತ್ಯಕ್ಕೆ ಇದರ ಮುಂದುವರಿದ ಭಾಗ ‘ತನ್ನೀರ್‌ಮತ್ತನ್ ವರ್ಷಂಙಳ್’ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.