Wednesday, January 22, 2025
ಸುದ್ದಿ

ಹೆಚ್ಚಾಗುತ್ತಾ ಹೋಗುತ್ತಿದೆ ಕಚ್ಚಾತೈಲದ ಬೆಲೆ – ಕಹಳೆ ನ್ಯೂಸ್

ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಇದರ ಪರಿಣಾಮ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಪೆಟ್ರೋಲ್ ಬೆಲೆ ಸತತವಾಗಿ ಮೂರು ದಿನಗಳಿಂದ ಏರಿಕೆ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೋಮವಾರ ಪೆಟ್ರೋಲ್ ದರವನ್ನು ಮತ್ತೆ ಏರಿಕೆ ಮಾಡಿದೆ.

ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್ ದರ ಲೀಟರಿಗೆ 13 ಪೈಸೆ ಹೆಚ್ಚಳಗೊಂಡಿದೆ. ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್‍ಗೆ 13 ಪೈಸೆ ಏರಿಕೆ ಆಗಿದೆ. ಕೋಲ್ಕತ್ತಾದಲ್ಲಿ 17 ಪೈಸೆ ಹೆಚ್ಚಳ, ಚೆನೈನಲ್ಲಿ 14 ಪೈಸೆ ಹೆಚ್ಚಳವಾಗಿದೆ. ಪೆಟ್ರೋಲ್ ದರ ಏರಿಕೆಯ ನಂತರ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 75 ರೂಪಾಯಿ 63 ಪೈಸೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಹೆಚ್‍ಪಿಸಿಎಲ್, ಬಿಪಿಸಿಎಲ್ ಮತ್ತು ಎಲ್‍ಒಸಿ ಪೆಟ್ರೋಲ್-ಡಿಸೇಲ್ ಬೆಲೆಯನ್ನು ಘೋಷಿಸುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿರುವ ಕಚ್ಚಾತೈಲದ ಬೆಲೆಯನ್ನು ಆಧರಿಸಿ ಇಲ್ಲಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು