Wednesday, January 22, 2025
ಸುದ್ದಿ

ನ್ಯೂಜಿಲೆಂಡ್​ನ ಆಲ್ರೌಂಡರ್​ ಜಿಮ್ಮಿ ನೀಶಾಮ್​ ಟ್ವೀಟ್​ :ಮಕ್ಕಳೆ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಬರಬೇಡಿ – ಕಹಳೆ ನ್ಯೂಸ್

ಲಂಡನ್​: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್​ನ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹಾಲಿ ರನ್ನರ್​ಅಪ್ ನ್ಯೂಜಿಲೆಂಡ್ ತಂಡವನ್ನು ಸೂಪರ್ ಓವರ್ ಸಾಹಸದಲ್ಲಿ ಮಣಿಸಿದ ಆತಿಥೇಯ ಇಂಗ್ಲೆಂಡ್​ ತಂಡ ಏಕದಿನ ಮಾದರಿಯ ವಿಶ್ವ ಸಾಮ್ರಾಟನಾಗಿ ಹೊರಹೊಮ್ಮಿತು.

ಈ ಮೂಲಕ ಈ ಬಾರಿಯಾದರೂ ಚೊಚ್ಚಲ ವಿಶ್ವಕಪ್​ ಗೆಲ್ಲಬೇಕು ಎಂಬ ನ್ಯೂಜಿಲೆಂಡ್​ನ ಕನಸು ನನಸಾಗಲೇ ಇಲ್ಲ. ಇದು ನ್ಯೂಜಿಲೆಂಡ್​ ಆಟಗಾರರು ತೀವ್ರವಾಗಿ ಮನನೊಂದುಕೊಳ್ಳುವಂತೆ ಮಾಡಿದೆ. ಇದೇ ಬೇಸರದಲ್ಲಿ ನ್ಯೂಜಿಲೆಂಡ್​ನ ಆಲ್ರೌಂಡರ್​ ಜಿಮ್ಮಿ ನೀಶಾಮ್​ ಟ್ವೀಟ್​ ಮಾಡಿ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದಗಳು, ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ ನಮಗೆ ಬೆಂಬಲ ಸೂಚಿಸಿದ್ದೀರಿ. ಆದರೆ, ನೀವು ನಿರೀಕ್ಷಿಸಿದ ಫಲಿತಾಂಶ ನೀಡಲು ನಮಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಟ್ವೀಟ್​ ಮಾಡಿದ್ದು, ಮಕ್ಕಳೆ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಬರಬೇಡಿ. ಅಡುಗೆ ಮಾಡುವುದೋ ಅಥವಾ ಬೇರೆ ಯಾವುದಾದರೂ ಕ್ಷೇತ್ರವನ್ನು ಆಯ್ದುಕೊಳ್ಳಿ. 60 ನೇ ವಯಸ್ಸಿನಲ್ಲಿ ಬೊಜ್ಜು ಬಂದ ದೇಹದೊಂದಿಗೆ ಸಂತೋಷದಿಂದ ಇಹಲೋಕ ಯಾತ್ರ ಮುಗಿಸಿ ಎಂದು ತಿಳಿಸಿದ್ದಾರೆ. ಈ ಮೂಲಕ ಅವರು ತಮಗಾಗಿರುವ ನಿರಾಸೆಯನ್ನು ಹೊರಹಾಕಿದ್ದಾರೆ.

ನ್ಯೂಜಿಲೆಂಡ್ ನೀಡಿದ 241 ರನ್​ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ 241 ರನ್​ ಗಳಿಸಿ ಆಲೌಟಾಯಿತು. ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಸೂಪರ್​ ಓವರ್​ ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್, ಬಟ್ಲರ್, ಸ್ಟೋಕ್ಸ್ ನಿರ್ವಹಣೆಯಿಂದ 15 ರನ್ ಪೇರಿಸಿತು. ನಂತರ ಕಿವೀಸ್ ಪರವಾಗಿ ಬ್ಯಾಟಿಂಗ್​ಗೆ ಇಳಿದ ಜಿಮ್ಮಿ ನೀಶಾಮ್ ಹಾಗೂ ಮಾರ್ಟಿನ್ ಗುಪ್ಟಿಲ್, ಜೋಫ್ರಾ ಆರ್ಚರ್​ರ 6 ಎಸೆತಗಳಲ್ಲಿ 15 ಬಾರಿಸಿತು. ಸೂಪರ್ ಓವರ್​ನಲ್ಲಿ ಪಂದ್ಯ ಟೈ ಆದರೂ, ಹೆಚ್ಚಿನ 8 ಬೌಂಡರಿ (24-16) ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು. (ಏಜೆನ್ಸೀಸ್​)