Wednesday, January 22, 2025
ಸುದ್ದಿ

ಲೇಡಿಗೋಷನ್ ಆಸ್ಪತ್ರೆ ಆವರಣದ ನಿರ್ಮಾಣ ಬರೋಬ್ಬರಿ ಆರು ವರ್ಷ ತುಂಬಿದರೂ ಅಪೂರ್ಣ – ಕಹಳೆ ನ್ಯೂಸ್

ಲೇಡಿಗೋಷನ್ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ ಮತ್ತು ಶಿಶು ಆರೋಗ್ಯ ವಿಭಾಗ (ಎಂಸಿಎಚ್) ವಿಭಾಗಕ್ಕೆ ಈಗ ಬರೋಬ್ಬರಿ ಆರು ವರ್ಷ ತುಂಬಿದೆ!

ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ಎಚ್‌ಎಂ) ಅಡಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಲ್ಲ ಜಿಲ್ಲೆಗಳಲ್ಲಿ ಎಂಸಿಎಚ್ ವಿಭಾಗವನ್ನು ಆರಂಭಿಸಲಾಗುತ್ತಿದೆ. ರಾಜ್ಯದ 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಂಸಿಎಚ್ ವಿಭಾಗಗಳು ಪೂರ್ಣಗೊಂಡಿವೆ. ಆದರೆ ದ.ಕ ಜಿಲ್ಲೆಯ ಏಕಮಾತ್ರ ಎಂಸಿಎಚ್ ವಿಭಾಗದ ಕಾಮಗಾರಿ ಆರು ವರ್ಷಗಳಿಂದ ಲೇಡಿಗೋಷನ್ ಆಸ್ಪತ್ರೆ ಆವರಣದಲ್ಲಿ ಕುಂಟುತ್ತಾ ಸಾಗುತ್ತಿದೆ. ತಾಯಿ ಮತ್ತು ಮಗುವಿನ ವಿಭಾಗ ನಿರ್ಮಾಣಕ್ಕೆ 2013ರಲ್ಲಿ ಚಾಲನೆ ನೀಡಲಾಗಿತ್ತು. ಪ್ರಸ್ತುತ ಶೇ.50 ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಬೇಕಾಗಬಹುದು ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಡ್ಡಿಯಾಯಿತು ಹೊಸ ಕಟ್ಟಡಕ್ಕೆ ಸ್ಥಳಾಂತರ ವಿಳಂಬ 
ಎಂಸಿಎಚ್ ಕಟ್ಟಡದ ಅರ್ಧದಷ್ಟು ಕಾಮಗಾರಿ ವರ್ಷ ಹಿಂದೆಯೇ ಪೂರ್ಣಗೊಂಡಿತ್ತು. ನಂತರ ಕಾಮಗಾರಿ ವಿಳಂಬವಾಯಿತು. ಎಂಸಿಎಚ್ ವಿಭಾಗದ ಪೂರ್ತಿ ನಿರ್ಮಾಣಕ್ಕೆ ಲೇಡಿಗೋಷನ್ ಹಳೇ ಕಟ್ಟಡದ ಅರ್ಧದಷ್ಟು ಭಾಗವನ್ನು ಕೆಡವಬೇಕಾದ ಅವಶ್ಯಕತೆಯಿತ್ತು. ಆದರೆ, ಎಂಸಿಎಚ್ ಕಾಮಗಾರಿ ಅರ್ಧ ಮುಗಿಯುತ್ತಾ ಬಂದರೂ ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಗರ್ಭಿಣಿ, ಬಾಣಂತಿಯರನ್ನು ಶಿಫ್ಟ್ ಮಾಡದ ಕಾರಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದೇ ಕೆಲಸ ಸ್ಥಗಿತಗೊಳಿಸಲಾಗಿತ್ತು. ಮೊದಲ ಹಂತದ ಕಾಮಗಾರಿಗಾಗಿ ಹಳೇ ಕಟ್ಟಡದಲ್ಲಿದ್ದ ಔಷಧ ಉಗ್ರಾಣ ಮತ್ತು ಅಡುಗೆ ಕೋಣೆ ಭಾಗವನ್ನು ಕೆಡವಲಾಗಿತ್ತು. ಪ್ರಸ್ತುತ ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರದ ಬಳಿಕ ಕಾಮಗಾರಿ ಮುಂದುವರಿದಿದ್ದು, ಪಿಲ್ಲರ್ ಆಳವಡಿಕೆ ಪೂರ್ಣಗೊಂಡಿದೆ. ಮಳೆಯಿಂದಾಗಿ ಕಾಮಗಾರಿ ಮತ್ತೆ ನಿಧಾನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

60 ಬೆಡ್ ಆಸ್ಪತ್ರೆ
ಒಟ್ಟು 11.25 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. 3989 ಚ.ಮೀ. ವಿಸ್ತೀರ್ಣದ ಈ ಕಟ್ಟಡದಲ್ಲಿ ತಳ ಅಂತಸ್ತಿನಲ್ಲಿ ಪಾರ್ಕಿಂಗ್ ಹಾಗೂ ಔಷಧ ಉಗ್ರಾಣ, ನೆಲ ಮಹಡಿಯಲ್ಲಿ ಸ್ಕ್ಯಾನಿಂಗ್, ಎಕ್ಸ್‌ರೇ ಮೊದಲಾದ ಸೌಲಭ್ಯಗಳಿರಲಿವೆ. ಮೊದಲ ಮಹಡಿಯಲ್ಲಿ ಬೆಡ್ ಹಾಗೂ ಇತರ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಒಟ್ಟು 60 ಬೆಡ್‌ಗಳಿರಲಿವೆ. ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕೇವಲ ತಾಯಿ ಮತ್ತು ಮಗುವಿಗೆಂದೇ ಮೀಸಲಿಡಲಾಗುತ್ತಿದೆ.