Wednesday, January 22, 2025
ರಾಜಕೀಯ

ಕುಮಾರಸ್ವಾಮಿ ಪಾಲಿಗೆ ರೇವಣ್ಣ ಶನಿಯಾಗಿದ್ದಾರೆ: ರೇವಣ್ಣ ವಿರುದ್ಧ ಕಿಡಿಕಾರಿದ ಮಾಜಿ ಶಾಸಕ ಬಾಲಕೃಷ್ಣ

ಮಂಡ್ಯ: ಕಾಂಗ್ರೆಸ್​ ಮತ್ತು ಜೆಡಿಎಸ್​ನ 10ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಅವರು ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದ್ದು, ಸಿಎಂ ಕುಮಾರಸ್ವಾಮಿ ಪಾಲಿಗೆ ಅವರು ಶನಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ ಈ ಹಿಂದೆ ನಾವು ಪಕ್ಷ ಬಿಟ್ಟಾಗ ಶನಿಗಳು ತೊಲಗಿವೆ ಎಂದು ರೇವಣ್ಣ ಹೇಳಿದ್ದರು. ಈಗ ಸಿಎಂ ಅವರಿಗೆ ಯಾರು ಶನಿ ಎಂಬುದು ಗೊತ್ತಾಗಿದೆ. ರೇವಣ್ಣ ಸಿಎಂ ಪಾಲಿಗೆ ಶನಿಯಂತಿದ್ದಾರೆ. ಅವರಿಂದಲೇ ಇಷ್ಟೆಲ್ಲ ಸಮಸ್ಯೆಗಳು ಎದುರಾಗಿವೆ ಎಂದು ಬಾಲಕೃಷ್ಣ ಆರೋಪಿಸಿದರು. ಇವರ ಆರೋಪಕ್ಕೆ ಮಾಜಿ ಸಚಿವ ಚಲುವರಾಯಸ್ವಾಮಿ ಕೂಡ ಧ್ವನಿಗೂಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಮತ್ತು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿ ಹಲವು ಪ್ರಮುಖ ನಾಯಕರು ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್​ ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಮನವೊಲಿಕೆಗೆ ಒಪ್ಪದ ಶಾಸಕರು ಮುಂಬೈಗೆ ತೆರಳಿದ್ದು, ಕೈ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು