Recent Posts

Tuesday, January 21, 2025
ಸುದ್ದಿ

ಚಲನಚಿತ್ರ ವಿತರಕ ಅಜಯ್ ಚಂದಾನಿ ಅಪಘಾತದಲ್ಲಿ ಸಾವು – ಕಹಳೆ ನ್ಯೂಸ್

ಬೆಂಗಳೂರು: ಭಾನುವಾರ ಸಂಜೆ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಚಲನಚಿತ್ರ ವಿತರಕ ಅಜಯ್ ಚಂದಾನಿ ಸಾವನ್ನಪ್ಪಿದ್ದಾರೆ. ಈ ಘಟನೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ. ಬೈಕ್ ಚಲಾಯಿಸುವಾಗ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ತನಿಖೆ ನಡೆಸಿರುವ ಹೈಗ್ರೌಡ್ಸ್ ಪೋಲೀಸರು ಹೇಳಿದ್ದಾರೆ.
ಚಲನಚಿತ್ರ ವಿತರಕರಾಗಿದ್ದ ಅಜಯ್ ಚಂದಾನಿ ಅವರು ತಾಯಿ ಮೀನಾ ಚಂದಾನಿ ಅವರೊಂದಿಗೆ ಸ್ಯಾಂಕಿ ರಸ್ತೆ ಬಳಿಯ ಅಬ್ಶಾಟ್ ಲೇಔಟ್‌ನಲ್ಲಿ ವಾಸವಿದ್ದರು.

ಭಾನುವಾರ ಸಂಜೆ ೫.೩೦ಕ್ಕೆ ಚಂದಾನಿ ಅವರ ಸ್ಪೋರ್ಟ್ಸ್ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಅತಿಯಾದ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದರು. ಆಗ ಅಕಸ್ಮಾತ್ತಾಗಿ ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಸವಾರ ಚಂದಾನಿ ಬೈಕಿನಿಂದ ಎಸೆಯಲ್ಪಟ್ಟು ಅಪಾರ್ಟ್ಮೆಂಟ್ ಒಂದರ ಗೊಡೆಗೆ ಡಿಕ್ಕಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ತಕ್ಷಣ ಟ್ರಾಫಿಕ್ ಪೋಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು