Tuesday, January 21, 2025
ಸಿನಿಮಾ

ಹೃತಿಕ್-ಟೈಗರ್ ವಾರ್ ಝಲಕ್‍ಗೆ ಶಾಕ್ ಆದ ಬಾಲಿವುಡ್!!- ಕಹಳೆ ನ್ಯೂಸ್

ಗ್ರೀಕ್ ಗಾಡ್ ಹೃತಿಕ್ ರೋಷನ್ ಮತ್ತು ಯೂತ್ ಐಕಾನ್ ಟೈಗರ್ ಶ್ರಾಫ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುತಿದ್ದಾರೆ ಮತ್ತು ಚಿತ್ರೀಕರಣವು ಭರದಿಂದ ಸಾಗುತ್ತಿದೆ ಎಂಬ ವಿಷಯ ಮಾತ್ರ ಎಲ್ಲರಿಗೂ ತಿಳಿದಿತ್ತು. ಆದ್ರೆ ಆ ಚಿತ್ರದ ಟೈಟಲ್ ಏನು ಎಂಬುವುದನ್ನು ಇದುವರೆಗೂ ಬಹಿರಂಗಪಡಿಸಿರಲಿಲ್ಲ ಚಿತ್ರತಂಡ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಈ ಚಿತ್ರದ ಅಫೀಷಿಯಲ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಚಿತ್ರದ ಶೀರ್ಷಿಕೆ ‘ವಾರ್’ ಎಂಬುದಾಗಿದ್ದು. ಚಿತ್ರದ ತಾರಾಗಣಕ್ಕೂ, ಅವರು ಯಾವಾಗಲೂ ಅಭಿನಯಿಸುತ್ತಿದ್ದ ಸಮಕಾಲೀನ ಪಾತ್ರಗಳಿಗೂ ಸರಿಯಾಗಿ ಒಪ್ಪುವಂತಿದೆ ಚಿತ್ರದ ಶೀರ್ಷಿಕೆ ವಾರ್.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಟೀಸರ್ ಬಗ್ಗೆ ಹೇಳುವುದಾದರೆ, ಚಿತ್ರದ ಕಥೆ ಹೃತಿಕ್ ಮತ್ತು ಟೈಗರ್ ಮಧ್ಯೆಯೇ ಸುತ್ತುತ್ತದೆ ಎಂಬುವುದು ಟೀಸರ್‌ನಿಂದ ಖಾತ್ರಿಗೊಳ್ಳುತ್ತದೆ. ಪವರ್ ಪ್ಯಾಕ್ಡ್ ಆ್ಯಕ್ಷನ್ ಸನ್ನಿವೇಶಗಳು ಟೀಸರ್‌ನಲ್ಲಿ ತುಂಬಿದೆ. ಲೊಕೇಷನ್‍ಗಳನ್ನು ನೋಡುತ್ತಿದ್ದರೆ ‘ವಾರ್’ ಬಹುತೇಕ ವಿದೇಶಿ ನೆಲದಲ್ಲಿ ನಡೆಯುತ್ತದೆ ಎಂದು ಭಾಸವಾಗುತ್ತದೆ.

ಟೀಸರ್‌ನಲ್ಲಿ ಬಹಿರಂಗಗೊಂಡ ಇನ್ನೊಂದು ವಿಷ್ಯ ಅಂದ್ರೆ, ವಾಣಿ ಕಪೂರ್ ಕೂಡಾ ಮಲ್ಟಿ ಸ್ಟಾರ್ ಚಿತ್ರ ‘ವಾರ್’ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.