ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ, ಒಂದು ಮೊಟ್ಟೆ ಕಥೆಯ ಮೂಲಕ ಸಿನೆಮಾ ಲೋಕಕ್ಕೆ ಪದಾರ್ಪಣೆ ಮಾಡಿದ ನಂತರ, ನಟನಾಗಿ ಇವರನ್ನು ಹುಡುಕಿಕೊಂಡು ಹಲವು ಸಿನೆಮಾಗಳು ಬರತೊಡಗಿದವು. ಆದ್ರೆ ಕಥೆಯ ಆಯ್ಕೆಯಲ್ಲಿ ಬ್ಯುಸಿಯಾಗಿರುವ ರಾಜ್, ಅಳೆದು ತೂಗಿ, ದಿ ಬೆಸ್ಟ್ ಕಥಾ ಹಂದರವಿರುವ ಸಿನೆಮಾಗಳಿಗೆ ಮಾತ್ರ ಸಹಿ ಹಾಕುತ್ತಿದ್ದಾರೆ. ‘ಮಹಿರ’ ಅಂತಹ ಸಿನೆಮಾಗಳಲ್ಲಿ ಒಂದು.
ಶೂಟಿಂಗ್, ಡಬ್ಬಿಂಗ್ ಎಲ್ಲಾ ಮುಗಿಸಿ, ಈಗಾಗಲೇ ಜು.7 ರಂದು ಲಂಡನ್‍ನಲ್ಲಿ ಪ್ರೀಮಿಯರ್ ಶೋ ಆಗಿರುವ ‘ಮಹಿರ’, ಅಲ್ಲಿನ ಭಾರತೀಯರು ಸೇರಿದಂತೆ ಬ್ರಿಟಿಷ್ ಪ್ರೇಕ್ಷಕರಿಂದಲೂ ಒಳ್ಳೆಯ ಮೆಚ್ಚುಗೆ ಪಡೆದಿದೆ.
ಈ ಕುರಿತು ಹೇಳುವ ನಿರ್ದೇಶಕ ಮಹೇಶ್‍ಗೌಡ, ಲಂಡನ್‍ನ ಪ್ರಸಿದ್ಧ ಅರೇನಾದಲ್ಲಿರುವ ಸಿನಿವರ್ಲ್ಡ್ ನಲ್ಲಿ ‘ಮಹಿರ’ ಪೂರ್ವಭಾವಿ ಪ್ರದರ್ಶನ ನಡೆದಿದೆ. ಚಿತ್ರವನ್ನು ಕನ್ನಡಿಗರಷ್ಟೇ ಅಲ್ಲ, ಬೇರೆ ಬೇರೆ ರಾಜ್ಯದವರು ವೀಕ್ಷಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಿ, ಬೆಂಗಾಲಿ ಭಾಷಿಗರ ಜೊತೆಯಲ್ಲಿ ಬ್ರಿಟಿಷ್ ಮಂದಿ ಕೂಡ ನೋಡಿದ್ದು ಚಿತ್ರದ ಹೆಮ್ಮೆ.
‘ಮಹಿರ’ ಜು.26 ರಂದು ಪ್ರಪಂಚದಾದ್ಯಂತ ರಿಲೀಸ್ ಆಗುತ್ತಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ತಾಯಿ ಹಾಗೂ ಮಗಳ ನಡುವೆ ಕಥೆ ಸಾಗಲಿದೆ ಎಂದು ಹೇಳುತ್ತಾರೆ ನಿರ್ದೇಶಕರು.