Tuesday, January 21, 2025
ಸುದ್ದಿ

ವಾಪಾಸ್ ಬರುತ್ತೇನೆ, ನಿಮ್ಮೆಲ್ಲರ ಹಣ ಹಿಂತಿರುಗಿಸುತ್ತೇನೆ – ಐಎಂಎ ಮುಖ್ಯಸ್ಥ ಮನ್ಸೂರ್ – ಕಹಳೆ ನ್ಯೂಸ್

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಮನ್ಸೂರ್, ಇಂದು ವಿಡಿಯೋ ಮೂಲಕ, 24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ಸಾಗುವ ಭರವಸೆ ನೀಡಿದ್ದಾರೆ. ಜತೆಗೆ ಎಲ್ಲರ ಹಣ ವಾಪಸ್ ನೀಡುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಾನು ಭಾರತ ಬಿಟ್ಟು ಹೋಗಿದ್ದು ದೊಡ್ಡ ತಪ್ಪು. ರಾಜಕಾರಣಿಗಳ ಒತ್ತಡದಿಂದ ನಾನು ಭಾರತವನ್ನ ಬಿಡಬೇಕಾಯಿತು. ಈಗಲೂ ನನಗೆ ನನ್ನ ಕುಟುಂಬದವರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ, ಹೇಗಿದ್ದಾರೆ ಗೊತ್ತಿಲ್ಲ. ಅವರನ್ನು ಸಂಪರ್ಕಿಸಲೂ ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನನಗೆ ಹುಷಾರಿಲ್ಲದ ಕಾರಣ ಬೆಡ್ ರೆಸ್ಟ್ ನಲ್ಲಿದ್ದೆ. ಡಯಾಬಿಟಿಸ್ ಹಾಗೂ ಕೆಲ ಆರೋಗ್ಯದ ಸಮಸ್ಯೆಯಿಂದ ಬೆಡ್ ರೆಸ್ಟ್ ನಲ್ಲಿ ನಾನು ಇರಬೇಕಾಯಿತು ಎಂದಿರುವ ಮನ್ಸೂರ್, ಈ ಕಾರಣದಿಂದಲೇ ಗ್ರಾಹಕರಿಗೆ ಹಣ ವಾಪಸ್ ಮಾಡಲು ಸಮಯವಾಗುತ್ತಿದೆ ಎಂದಿದ್ದಾರೆ. ಹಾಗೂ ನನ್ನ ಆಪರೇಷನ್‍ಗೆ ನನ್ನ ಬಳಿ ಹಣವಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ಹಾಗೆ ಬೆಂಗಳೂರಿಗೆ ಬಂದಾಗ ತನಗೆ ಪೊಲೀಸರು ಸಹಾಯ ಮಾಡಬೇಕು, ನನ್ನಿಂದ ವಂಚನೆಗೊಳಗಾದವರಿಂದ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು