Tuesday, January 21, 2025
ಸುದ್ದಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಚಪ್ಪರ ಮುಹೂರ್ತ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಪುತ್ತೂರು ಘಟಕದ ಆತಿಥ್ಯದಲ್ಲಿ ಆ. 11ರಂದು ನಡೆಯಲಿರುವ ಯುವವಾಹಿನಿ ಕೇಂದ್ರ ಸಮಿತಿಯ ವಾರ್ಷಿಕ ಸಮಾವೇಶದ ಪ್ರಯುಕ್ತ ಜು. 15ರಂದು ಚಪ್ಪರ ಮುಹೂರ್ತ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಲಿಂಗೇಶ್ವರ ದೇವಳದ ಅರ್ಚಕರಾದ ಜಯರಾಮ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಚಪ್ಪರ ಮುಹೂರ್ತ ನೆರವೇರಿತು. ರಾಮಜಾಲು ಗರಡಿಯ ಸಂಜೀವ ಪೂಜಾರಿ ಕೂರೇಲು ಅವರು ಚಪ್ಪರ ಮುಹೂರ್ತಕ್ಕೆ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೇಂದ್ರ ಯುವವಾಹಿನಿ ಘಟಕದ ಅಧ್ಯಕ್ಷ ಜಯಂತ ನಡುಬೈಲು, ಯುವವಾಹಿನಿ ಸಮಾವೇಶದ ನಿರ್ದೇಶಕ ಶಶಿಧರ ಕಿನ್ನಿಮಜಲು, ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ನಾರಾಯಣ ಕುರಿಕ್ಕಾರ್, ಕಾರ್ಯದರ್ಶಿ ಪ್ರಶಾಂತ್ ಪಲ್ಲತ್ತಡ್ಕ ಹಾಗೂ ಯುವವಾಹಿನಿ ಪದಾಧಿಕಾರಿಗಳು, ಬಿಲ್ಲವ ಸಂಘ ಹಾಗೂ ಮಹಿಳಾ ಸಂಘದ ಅಧ್ಯಕ್ಷರು , ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.