Wednesday, January 22, 2025
ಸುದ್ದಿ

ಜುಲೈ 19ರಂದು ಉಡುಪಿಯಲ್ಲಿ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಸಂಸ್ಮರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಉಡುಪಿ: ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ನಮ್ಮನಗಲಿ ಜುಲೈ 19ಕ್ಕೆ ಒಂದು ವರ್ಷ.. ಈ ಹಿನ್ನೆಲೆಯಲ್ಲಿ ಪುಣ್ಯ ದಿನವಾದ ಜುಲೈ 19ರಂದು, ಮಧ್ಯಾಹ್ನ ಗಂಟೆ 12ಕ್ಕೆ ಉಡುಪಿಯ ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ವಿದ್ಯಾಲಯದಲ್ಲಿ, ಶ್ರೀ ಲಕ್ಷ್ಮೀವರ ಸಂಸ್ಮರಣೆ, ಶ್ರೀ ಈಶ ವಿಠಲ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.

ಖ್ಯಾತ ವಕೀಲರಾದ ರವಿಕಿರಣ್ ಮುರ್ಡೇಶ್ವರ, ಉಡುಪಿಯ ಸಾಯಿನಾಥ ಗ್ರೂಪ್ ಆಡಳಿತ ನಿರ್ದೇಶಕರಾದ ಮನೋಹರ್ ಶೆಟ್ಟಿ, ಎಎಸಿಇ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಲಾತವ್ಯ ಆಚಾರ್ಯ, ಯುವ ವಾಗ್ಮಿಯಾಗಿರುವ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಸ್ಪಂದನ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥರಾದ ಜನಾರ್ಧನ ಮೊದಲಾದವರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜುಲೈ 19ರಂದು ಬೆಳಿಗ್ಗೆ 11.15ಕ್ಕೆ ಉಡುಪಿಯ ಪಾಂಡುರಂಗ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿಶೇಷ ಮಕ್ಕಳಿಗೆ ಮಧ್ಯಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು