Recent Posts

Tuesday, November 26, 2024
ಸುದ್ದಿ

ಸಂಸ್ಕೃತ, ಭಾರತವನ್ನು ಏಕೀಕರಣ ಮಾಡುವ ಭಾಷೆ – ಕಹಳೆ ನ್ಯೂಸ್

ನವದೆಹಲಿ: ಸಂಸ್ಕೃತ ಭಾರತವನ್ನು ಏಕೀಕರಣ ಮಾಡುವ ಭಾಷೆಯಾಗಿದ್ದು ದೇಶಾದ್ಯಂತ ಎಲ್ಲಾ ಹಂತಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದನ್ನು ಅಭಿವೃದ್ಧಿಪಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿತ ಸಂಸ್ಕೃತ ಭಾರತಿ ಒತ್ತಾಯಿಸಿದೆ.

ಕೇಂದ್ರ ಸಚಿವರಾದ ಹರ್ಷವರ್ಧನ, ಪ್ರತಾಪ್ ಸಾರಂಗಿ, ಅಶ್ವಿನಿ ಚೌಬೆ, ಶ್ರೀಪಾದ್ ಯೆಸ್ಸೊ ನಾಯಕ್ ಸೇರಿದಂತೆ ಲೋಕಸಭೆಯ ನೂತನ 47 ಸಂಸದರನ್ನು ಸಂಸ್ಕೃತ ಭಾರತಿ ಸನ್ಮಾನಿಸಿದೆ. ಇವರೆಲ್ಲ ಸಂಸ್ಕೃತ ಭಾಷೆಯಲ್ಲಿಯೇ ಈ ಬಾರಿ ಪ್ರಮಾಣವಚನ ಸ್ವೀಕರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ಪುರಾತನ ಭಾಷೆಯಾದ ಸಂಸ್ಕೃತವನ್ನು ಸದನದ ಸದಸ್ಯರಿಗೆ ಪರಿಚಯಿಸಲು ತರಬೇತಿ ನೀಡುವಂತೆ ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ಸಂಸ್ಕೃತ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಆರ್ ಎಸ್‍ಎಸ್ ನಾಯಕ ದಿನೇಶ್ ಕಾಮತ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು