Thursday, January 23, 2025
ಸುದ್ದಿ

ಶಾಲಾ ಮಕ್ಕಳಿಗೆ ವಿದ್ಯುತ್ ಶಾಕ್ – 51 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಲಕ್ನೋ: ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ 51 ವಿದ್ಯಾರ್ಥಿಗಳು ವಿದ್ಯುತ್ ಆಘಾತಕ್ಕೊಳಗಾದ ಘಟನೆ ನಡೆದಿದೆ. ಹೈಟೆನ್ಷನ್ ತಂತಿ, ಶಾಲೆಯ ಆವರಣದ ಮರಕ್ಕೆ ಸಂಪರ್ಕ ಹೊಂದಿದ ಪರಿಣಾಮ ವಿದ್ಯಾರ್ಥಿಗಳಿಗೆ ಶಾಕ್ ಹೊಡೆಯಿತು ಎಂದು ಹೇಳಲಾಗಿದೆ. ಗಾಯಾಳು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳು ಚಪ್ಪಲಿ ತೆಗೆದು ನೆಲದ ಮೇಲೆ ಗೋಣಿ ಚೀಲಗಳಲ್ಲಿ ಕುಳಿತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಶಾಲೆಯ ಆವರಣದ ಮರಗಳ ನಡುವೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ಮರದ ಜತೆ ಸಂಪರ್ಕಯಿದ್ದ ಕಾರಣ ಈ ಘಟನೆಗೆ ನಡೆದಿದೆ. ನೆಲದಲ್ಲಿ ತೇವಾಂಶ ಇದ್ದ ಕಾರಣ ಪಕ್ಕದಲ್ಲೇ ಇದ್ದ ಶಾಲಾ ಕಟ್ಟಡದ ನೆಲದಲ್ಲಿ ಕುಳಿತಿದ್ದ ಮಕ್ಕಳಿಗೆ ಶಾಕ್ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

51 ಮಕ್ಕಳು ಗಾಯಗೊಂಡ ಘಟನೆ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕೃಷ್ಣ ಕರುಣೇಶ್ ಕ್ರಮ ತೆಗೆದು ಕೊಳ್ಳುವಂತೆ ಆದೇಶ ನೀಡಿದ್ದಾರೆ. 29 ವಿದ್ಯಾರ್ಥಿಗಳಿಗೆ ಉಟ್ರಾಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 22 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಕರುಣೇಶ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು