Wednesday, January 22, 2025
ಸುದ್ದಿ

ಪಂಜ ವನಿತಾ ಸಮಾಜದ ನೂತನ ಕಟ್ಟಡ ಉದ್ಘಾಟನೆ – ಕಹಳೆ ನ್ಯೂಸ್

????????????????????????????????????

ಸುಬ್ರಹ್ಮಣ್ಯ: ಸಮಾಜ ಮುಖಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮಹಿಳೆಯರಿಗೆ ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾಮಾಜಿಕ ಸೇವೆಯ ಮೂಲಕ ದೇಶಸೇವೆಗೈಯಲು ಇದೊಂದು ಅವಕಾಶ. ಮಹಿಳೆಯರು ಆತ್ಮಸ್ಥೈರ್ಯ ಹೆಚ್ಚಳವಾಗಲು ಸಂಘಟನೆ ಅಗತ್ಯ ಎಂದು ಕೇನ್ಯ ಕಿರಣ ನಿಲಯದ ದಾನಿ ನಿರಂಜಿನಿ ಆರ್ ಶೆಟ್ಟಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಜ ಐವತ್ತೋಕ್ಲು ಗ್ರಾಮದಲ್ಲಿ ನಿರ್ಮಾಣಗೊಂಡ ನೂತನ ವನಿತಾ ಸಮಾಜ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಕುಗ್ರಾಮಗಳಲ್ಲಿ ಮಹಿಳೆಯರನ್ನು ಒಗ್ಗೂಡಿಸಿ, ಸಮಾಜ ಮುಖಿಯಾಗಿ ಮಹಿಳೆಯರು ಇರಬೇಕು ಎನ್ನುವ ಮಹತ್ವಾಕಾಂಕ್ಷೆ ಹಿರಿಯರಲ್ಲಿತ್ತು. ಅದನ್ನು ಮುಂದುವರೆಸುತ್ತಿರುವ ಪಂಜ ವನಿತಾ ಸಮಾಜದ ಸೇವೆ ಶ್ಲಾಘನೀಯ ಎಂದು ಹೇಳಿ ಅವರು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಾ.ಪಂ ಸದಸ್ಯ ಚನಿಯ ಕಲ್ತಡ್ಕ ಸಮಾಜದಲ್ಲಿ ತಾಯಂದಿರಿಗೆ ವಿಶೇಷ ಸ್ಥಾನಮಾನ, ಗೌರವ ಇದೆ. ಅದಕ್ಕೆ ಪಾತ್ರರಾಗುವ ಮೂಲಕ ಸಬಲೆಯಾಗಿಯೂ ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ಸಾಧನೆ ತೋರುತ್ತಿದ್ದಾರೆ. ಸಂಘಟನೆಗಳ ಮೂಲಕ ಸ್ಥಳಿಯವಾಗಿ ಸಕ್ರೀಯವಾಗಿರುವ ಪಂಜದ ಮಹಿಳಾ ಸಂಘಟನೆ ಸ್ವಂತ ಕಟ್ಟಡ ಹೊಂದುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಪಂಜ ಗ್ರಾ.ಪಂ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿ ತಾ.ಪಂ ಸದಸ್ಯ ಅಬ್ದುಲ್ ಗಪೂರ್, ಮಹಿಳಾ ಮಂಡಳಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ಹರಿಣಿ ಸದಾಶಿವ, ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಗೌರವಾಧ್ಯಕ್ಷ ಬಿ.ಎಂ ಆನಂದ ಕಂಬಳ, ಮಹಿಳಾ ಮಂಡಲಗಳ ಒಕ್ಕೂಟದ ತಾಲೂಕು ಅಧ್ಯಕ್ಷೆ ಇಂದಿರಾ ರಾಜಶೇಖರ ರೈ, ಶ್ರೀ ಕ್ಷೇ. ಗ್ರಾ. ಯೋಜನೆ ಮೇಲ್ವಿಚಾರಕ ವಸಂತ ಕೆ.ಕೆ, ಉಪಸ್ಥಿತರಿದ್ದರು.

ಸಹಕರಿಸಿದವರಿಗೆ ಸಮ್ಮಾನ, ಗೌರವ
ಕಾರ್ಯಕ್ರಮದಲ್ಲಿ ಸುಸಜ್ಜಿತವಾಗಿ ಕಡ್ಡಟ ನಿರ್ಮಿಸಿದ ಗುತ್ತಿಗೆದಾರ ಕೆ.ವಿ ವಿಟ್ಟಲ್‍ದಾಸ್, ದಾನಿಗಳಾದ ಬಿ.ಎಂ ಆನಂದ ಗೌಡ ಕಂಬಳ, ಚಂದ್ರಾಹೊನ್ನಪ್ಪ, ಹೇಮಲತಾ ಜನಾರ್ಧನ ನೆಕ್ಕಿಲ, ವೀಣಾ ಮೋನಪ್ಪ ನಾಯ್ಕ, ಮನು ಗಿರಿಧರ ಶೆಟ್ಟಿ, ಮಮತಾ ಸುದರ್ಶನ ಶೆಟ್ಟಿ, ನಿರಂಜಿನಿ ರವೀಂದ್ರನಾಥ ಶೆಟ್ಟಿ, ದೇವಕಿ ಸೀತಾರಾಮ, ಡಾ. ದೇವಿಪ್ರಸಾದ್ ಪುಷ್ಪಾ ಡಿ. ಪ್ರಸಾದ್ ದಂಪತಿಗಳನ್ನು ಹಾಗೂ ದಾನಿ ಇಂದಿರಾ ಜೆ ರೈ, ರಾಷ್ಟ್ರೀಯ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಸಹಕರಿಸಿದ ಅಬ್ದುಲ್ ಗಪೂರ್ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷೆ ಪುಷ್ಪಾ.ಡಿ ಪ್ರಸಾದ್ ಕಾನತ್ತೂರು ಪ್ರಸ್ತಾವನೆಗೈದರು. ವನಿತಾ ಸಮಾಜದ ಅಧ್ಯಕ್ಷೆ ಚಂದ್ರಾ ಹೊನ್ನಪ್ಪ ಚಿದ್ಗಲ್ ಸ್ವಾಗತಿಸಿದರು. ಕಾರ್ಯದರ್ಶಿ ಹೇಮಲತಾ ಜನಾರ್ಧನರಾವ್ ನೆಕ್ಕಿಲ ವಂದಿಸಿದರು. ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು. ವನಿತಾ ಸಮಾಜದ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.