ನವದೆಹಲಿ: ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಅಂಗವಾಗಿ ಹಾಗೂ ಯುದ್ಧದ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊಡಲು ದೆಹಲಿ, ವಾರಾಣಸಿ ಮತ್ತು ಕಾಶಿ ವಿಶ್ವನಾಥ ಎಕ್ಸ್ ಪ್ರೆಸ್ ರೈಲಿಗೆ ಕಾರ್ಗಿಲ್ ಯುದ್ಧದ ಘಟನೆಗಳು ಮತ್ತು ಸೈನಿಕರ ಸಾಹಸಮಯ ಚಿತ್ರಗಳ ವಿನೈಲ್ ಸ್ಟಿಕ್ಕರ್ ಅಂಟಿಸಲಾಗಿದೆ.
ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷವರ್ಧನ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಹಸಿರು ನಿಶಾನೆ ತೋರಿಸುವ ಮುಖಾಂತರ ರೈಲು ಓಡಾಟಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಗಿಲ್ ಯುದ್ಧದ ರೋಚಕ ಘಟನೆಗಳು ಮತ್ತು ಸೈನಿಕರ ಸಾಹಸಗಳನ್ನು ಜನಸಾಮಾನ್ಯರಿಗೆ ತಿಳಿಯಲು ಬ್ರಹ್ಮಪುತ್ರ ಮೇಲ್, ಸೀಮಾಂಚಲ್ ಎಕ್ಸ್ ಪ್ರೆಸ್, ಗೊಂಡ್ವಾನಾ ಎಕ್ಸ್ ಪ್ರೆಸ್, ಗೋವಾ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ಸೇರಿ 10 ರೈಲುಗಳಿಗೆ ಇದೆ ರೀತಿಯಾದ ಚಿತ್ರಗಳನ್ನು ಅಂಟಿಸಲಾಗುತ್ತಿದೆ. ಇದರ ಪೈಕಿ ಕಾಶಿ ವಿಶ್ವನಾಥ ಎಕ್ಸ್ ಪ್ರೆಸ್ ರೈಲು ಮೊದಲನೆಯದಾಗಿದೆ.