Wednesday, January 22, 2025
ಸುದ್ದಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಳ್ನಾಡು, ಸಾಲೆತ್ತೂರು ವತಿಯಿಂದ ಅಸ್ವಸ್ಥತರಿಗೆ ಆರೋಗ್ಯ ನಿಧಿ ವಿತರಣೆ – ಕಹಳೆ ನ್ಯೂಸ್

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಳ್ನಾಡು, ಸಾಲೆತ್ತೂರು ಇದರ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ, ಅಸ್ವಸ್ಥತೆಯಿಂದ ಬಳಲುತ್ತಿರುವ 4 ಮಂದಿಗೆ ಆರೋಗ್ಯ ನಿಧಿಯಿಂದ ತಲಾ 10,000 ರೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಉದಯ್ ಕುಮಾರ್ ರೈ ಅಗರಿಯವರು ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಪ್ರತಿಮಾ ಉದಯ್ ಕುಮಾರ್ ರೈ, ಗೌರವಾಧ್ಯಕ್ಷರಾದ ಮಾಧವ ಮಾವೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕೋಕಳ, ಕೋಶಾಧಿಕಾರಿ ರಾಜೇಶ್ ರೈ ಪಾಲ್ತಾಜೆ, ಪಂಚಾಯತ್ ಸದಸ್ಯರಾದ ದೇವಿದಾಸ್ ಶೆಟ್ಟಿ, ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ. ಎಸ್.ಪೂಜಾರಿ, ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತೀರಾ ಬಡಕುಟುಂಬವೊಂದಕ್ಕೆ 25,000 ರೂಪಾಯಿ ಮೀಸಲಿಡಲಾಗುವುದೆಂದು ಘೋಷಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು