ಶ್ರೀ ನಾರಾಯಣ ಗೌಡ ಸಂಕೇಶ ಇವರ ಗದ್ದೆಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಂಡ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು – ಕಹಳೆ ನ್ಯೂಸ್
ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ನಾರಾಯಣ ಗೌಡ ಸಂಕೇಶ ಇವರ ಗದ್ದೆಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿದರು.
ವಿದ್ಯಾಲಯದ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ದೀಪ ಬೆಳಗಿಸಿ ಕೃಷಿ ಕಾರ್ಯಕ್ಕೆ ಚಾಲನೆ ನೀಡಿದರು.
ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕೃಷಿ ಸಹಕಾರಿ. ಊಟದ ಪ್ರತಿಯೊಂದು ಅಗಳನ್ನು ಅಗಿಯುವಾಗ ರೈತರ ಪರಿಶ್ರಮ ನಮಗೆ ಅಂದಾಜಾಗಬೇಕು. ಶಿಕ್ಷಣ ಪಡೆದವರು ಕೃಷಿಯಿಂದ ದೂರ ಸರಿಯುತ್ತಿರುವುದು ಸರಿಯಲ್ಲ ಎಂದು ವಿಷಾಧ ವ್ಯಕ್ತ ಪಡಿಸಿದರು.
ಆಡಳಿತ ಮಂಡಳಿಯ ನಿರ್ದೇಶಕ ಶ್ರೀ ಉಮೇಶ್ ಶೆಟ್ಟಿ ಸಾಯಿರಾಂ ಮಾತನಾಡಿ ಭತ್ತದ ಕೃಷಿಯಿಂದ ಈ ಮಣ್ಣಿನ ಜೊತೆಗಿನ ಒಡನಾಟ ಸಾಧ್ಯ. ಅದು ಚಿಕಿತ್ಸಕ ರೀತಿಯಲ್ಲಿ ದೇಹದ ಮೇಲೆ ಉತ್ತಮ ಪರಿಣಾಮ ಬೀರಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ ಗದ್ದೆ ಇದ್ದಲ್ಲಿ ನೀರಿನ ಅಭಾವ ಕಡಿಮೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಚಟುವಟಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕಿ ಪ್ರಮೀಳಾ ಲೋಕೇಶ್, ಪದವಿಪೂರ್ವ ವಿಭಾಗದ ಮುಖ್ಯಸ್ಥರಾದ ಮಹೇಶ್ ನಿಟಿಲಾಪುರ, ಪ್ರೌಢ ವಿಭಾಗದ ಮುಖ್ಯಶಿಕ್ಷಕಿ ಶೈಲಶ್ರೀ ರೈ, ಉಪನ್ಯಾಸಕವೃಂದ, ಶಿಕ್ಷಕವೃಂದ, ವಿದ್ಯಾರ್ಥಿಗಳು ಸಹಕರಿಸಿದರು.
ವಿಶೇಷ ವರದಿ ಮಾಡುವುದಾದರೆ:
1. ಮಧ್ಯಾಹ್ನದ ಉಚಿತ ಭೋಜನಕ್ಕೆ ಅಳಿಲು ಸೇವೆ (ಅಮೃತ ಭೋಜನ)
2. ಪ್ರಾಯೋಗಿಕ ಪಾಠ
3. ಕೃಷಿಯತ್ತ ಆಸಕ್ತಿ ಮೂಡಿಸಲು/ ರೈತರ ಕಷ್ಟ ಅರಿಯಲು
4. ಭತ್ತದ ಕೃಷಿ – ನೆಡುವಲ್ಲಿಂದ ಕಟಾವು ಮಾಡುವವರೆಗಿನ ಎಲ್ಲಾ ಪ್ರಕ್ರಿಯೆ ಶಾಲಾ ವಿದ್ಯಾರ್ಥಿಗಳೇ ಮಾಡಲಿದ್ದಾರೆ.