Tuesday, January 21, 2025
ಸಿನಿಮಾ

‘ನಾನು ಚೆನ್ನಾಗಿ ಇದ್ದೇನೆ.. ಚೆನ್ನಾಗಿಯೇ ಇರುತ್ತೇನೆ’ – ದ್ವಾರಕೀಶ್ – ಕಹಳೆ ನ್ಯೂಸ್

“ನಾನು ಆರೋಗ್ಯವಾಗಿ ಇದ್ದೇನೆ, ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ.” ಎಂದು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ತಿಳಿಸಿದ್ದಾರೆ.

ದ್ವಾರಕೀಶ್ ನಿಧನ ಹೊಂದಿದ್ದಾರೆ ಎನ್ನುವ ಸುಳ್ಳು ಸುದ್ದಿ ಸೋಮವಾರ ರಾತ್ರಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ವಾಟ್ಸ್ ಅಪ್ ನಲ್ಲಿ ಆರ್‍ಐಪಿ ದ್ವಾರಕೀಶ್ ಸರ್ ಎನ್ನುವ ಪೋಸ್ಟ್ ಗಳು ಕಾಣುತ್ತಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಾರಕೀಶ್‍ ರವರ ಬಗ್ಗೆ ಬಂದ ಈ ಸುದ್ದಿ ಕೇಳಿ ಅನೇಕರು ಆಘಾತಗೊಂಡಿದ್ದರು. ಈ ಸುದ್ದಿ ನಿಜನಾ ಸುಳ್ಳಾ ಎನ್ನುವ ಗೊಂದಲ ಇನ್ನು ಕೆಲವರಿಗೆ ಇತ್ತು. ಆದರೆ, ಈ ವಿಷಯದ ಬಗ್ಗೆ ಸ್ವತಃ ದ್ವಾರಕೀಶ್ ಅವರೇ ಮಾತನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ನಿಮ್ಮ ದ್ವಾರಕೀಶ್.. ಕರ್ನಾಟಕ ಕುಳ್ಳ.. ಆರೋಗ್ಯವಾಗಿ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸದಿಂದ ನಾನು ಚೆನ್ನಾಗಿ ಇದ್ದೇನೆ. ಮುಂದೆ ಚೆನ್ನಾಗಿ ಇರುತ್ತೇನೆ. ಎಲ್ಲವೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ.” ಎಂದಿದ್ದಾರೆ.

ಈ ಬಗ್ಗೆ ನಿರ್ದೇಶಕ ಕೆ ಎಂ ಚೈತನ್ಯ ಸಹ ಫಿಲ್ಮಿಬೀಟ್ ಕನ್ನಡದ ಜೊತೆಗೆ ಇಂದು ಮಾತನಾಡಿದ್ದರು. ನನಗೆ ನಿನ್ನೆ ಮಧ್ಯರಾತ್ರಿ ಈ ವಿಷಯ ತಿಳಿಯಿತು. ಆಗ ತಕ್ಷಣ ಅವರ ಮಗನ ಜೊತೆಗೆ ಮಾತನಾಡಿದೆ. ದ್ವಾರಕೀಶ್ ಸರ್‍ ಗೆ ಏನು ಆಗಿಲ್ಲ ಎಂದು ಅವರು ಹೇಳಿದ್ದಾರೆ.