Tuesday, January 21, 2025
ಸಿನಿಮಾ

ಕೋಟಿಗೊಬ್ಬ ಸೆಟ್ ಸೇರಿದ ಕಿಚ್ಚ ಸುದೀಪ್ – ಕಹಳೆ ನ್ಯೂಸ್

ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ಸುದೀಪ್ ಈಗ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ರಾಮೂಜಿ ಫಿಲ್ಮ್ ಸಿಟಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಿನಿಮಾ ಶಿವ ಕಾರ್ತಿಕ್‍ನ ಮೊದಲ ಸಿನಿಮಾ ಆಗಿದ್ದು, ನಾಯಕಿ ಪಾತ್ರದಲ್ಲಿ ಮಾಲಿವುಡ್ ನಟಿ ಮಡೋನಾ ಸೆಬಾಸ್ಟಿಯನ್ ನಟಿಸುತ್ತಿದ್ದಾರೆ, ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

15 ದಿನಗಳ ಕಾಲ ಚಿತ್ರೀಕರಣ ನಿಗಧಿಯಾಗಿದ್ದು, ನಂತರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಕೋಟಿಗೊಬ್ಬ-2 ಚಿತ್ರಕ್ಕೆ ನಿರ್ಮಾಪಕರಾಗಿದ್ದ ಸೂರಪ್ಪ ಬಾಬು ಹಾಗೂ ಸುದೀಪ್ ಈ ಚಿತ್ರದಲ್ಲೂ ಜೊತೆಗೂಡಿದ್ದು, ಕೋಟಿಗೊಬ್ಬ-3 ಚಿತ್ರಕ್ಕೆ ಸ್ವತಃ ಸುದೀಪ್ ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ ಇದೆ.