Tuesday, January 21, 2025
ಸಿನಿಮಾ

ಲೊಕೇಷನ್ ಹುಡುಕಾಟದಲ್ಲಿ ರಿಷಭ್ ಶೆಟ್ಟಿ ಬ್ಯುಸಿ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನ ಸ್ಟಾರ್ ಡೈರೆಕ್ಟರ್ ರಿಷಭ್ ಶೆಟ್ಟಿ, ತಮ್ಮ ಮುಂದಿನ ನಿರ್ದೇಶನದ ಚಿತ್ರ ‘ರುದ್ರ ಪ್ರಯಾಗ’ಕ್ಕಾಗಿ ಚಿತ್ರತಂಡದೊಂದಿಗೆ ಕರ್ನಾಟಕದ ಪ್ರಸಿದ್ಧ ಆಭಯಾರಣ್ಯಗಳಲ್ಲಿ ಒಂದಾಗಿರುವ ‘ದಾಂಡೇಲಿ’ಯಲ್ಲಿ ಲೊಕೇಷನ್‍ಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದ ಮೊದಲ ಪೋಸ್ಟರ್ ನಲ್ಲಿ ಚಿರತೆಯೊಂದು ಮರದ ಮೇಲೆ ಕುಳಿತಿರುವಂತೆ ತೋರಿಸಲಾಗಿತ್ತು. ಮತ್ತು ಆ ಚಿರತೆಯ ಮೇಲೆ ಯಾರೋ ಬೇಟೆಗಾರರಿಬ್ಬರು ಟಾರ್ಚ್ ಲೈಟ್ ಹಾಕುವಂತೆ ಪೋಸ್ಟರ್ ಡಿಸೈನ್ ಮಾಡಿಸಿದ್ದರು ನಿರ್ದೇಶಕರು.
ಇದನ್ನು ಗಮನಿಸುತ್ತಿದ್ರೆ, ದಾಂಡೇಲಿ ಹೇಳಿ ಕೇಳಿ ವನ್ಯ ಜೀವಿಗಳ ತಾಣ ಹಾಗಾಗಿ, ಪೋಸ್ಟರ್ ನಲ್ಲಿರುವ ಚಿರತೆಯ ದೃಶ್ಯಗಳನ್ನು ಇಲ್ಲಯೇ ಸೆರೆಹಿಡಿಯುತ್ತಾರೋ ಎಂಬ ಅನುಮಾನ ಸಿನಿ ಪ್ರೇಕ್ಷಕರದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಚಿತ್ರವಾದ ಬಳಿಕ ಮುಂದಿನ ಚಿತ್ರಕ್ಕೆ, ಗ್ಯಾಪ್ ತೆಗೆದುಕೊಳ್ಳದೆ ನಿರಂತರ ಸಿನೆಮಾಗಳಲ್ಲಿ ತೊಡಗಿಕೊಳ್ಳುವ, ರಿಷಭ್ ಶೆಟ್ಟಿಯವರ ಕಾರ್ಯ ವೈಖರಿ ಕನ್ನಡ ಚಿತ್ರರಂಗಕ್ಕೆ ವರದಾನ ಮತ್ತು ನಿಜಕ್ಕೂ ಶ್ಲಾಘನೀಯ.