Tuesday, January 21, 2025
ಸುದ್ದಿ

ಶೈಖುನಾ ಬಾವ ಉಸ್ತಾದ್ ಅನುಸ್ಮರಣಾ ಸಂಗಮ – ಕಹಳೆ ನ್ಯೂಸ್

ಪುತ್ತೂರು : ಮದನೀಸ್ ಅಸೋಸಿಯೇಷನ್ ಪುತ್ತೂರು ತಾಲೂಕು ಇದರ ಅಧೀನದಲ್ಲಿ ಮರ್ಹೂಂ ಶೈಖುನಾ ಬಾವ ಉಸ್ತಾದ್‌ರವರ ಅನುಸ್ಮರಣಾ ಸಮಾರಂಭವು ಇತ್ತೀಚೆಗೆ ಪುತ್ತೂರು ಸುನ್ನೀ ಸೆಂಟರ್‌ನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದಂ ಮದನಿ ಆತೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಂಗಮವನ್ನು ತಿಂಗಳಾಡಿ ಅಝೀಝ್ ಮದನಿರವರು ಔಪಚಾರಿಕವಾಗಿ ಉದ್ಘಾಟಿಸಿದರು. ಸಮಿತಿಯ ನಿರ್ದೇಶಕ ಮದನೀಸ್, ಕೇಂದ್ರ ಸಮಿತಿಯ ಕಾರ್ಯದರ್ಶಿಯೂ ಆದ ಅಬ್ಬಾಸ್ ಮದನಿ ಬಂಡಾಡಿರವರು ಅನುಸ್ಮರಣಾ ಭಾಷಣ ನಡೆಸಿದರು. ಮಿತ್ತೂರು ಹಂಝ ಮದನಿ ಮುಖ್ಯ ಪ್ರಭಾಷಣ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಹಮ್ಮದ್ ಮದನಿ ತಿಂಗಳಾಡಿ, ಅಬ್ದುಲ್ಲ ಮದನಿ ಇರ್ದೆ, ಅಬ್ದುರ್ಹ್ಮಾನ್ ಮದನಿ ಬನ್ನೂರು, ಟಿ.ಕೆ.ಇಬ್ರಾಹಿಮ್ ಮದನಿ ಮರ್ದಾಳ,ಆಶಂಸ ಭಾಷಣ ಮಾಡಿದರು. ಜಮಾಲ್ ಮದನಿ ಆತೂರು ಸ್ವಾಗತಿಸಿ ಕೊನೆಯಲ್ಲಿ ಶಾಫಿ ಮದನಿ ಮಾಡಾವು ವಂದಿಸಿದರು.