ಅತೃಪ್ತರ ರಾಜೀನಾಮೆ ಪ್ರಕರಣ ವಿಚಾರಣೆ ಸಂಬಂಧ ಇಂದು ಸುಪ್ರೀಂ ಕೋರ್ಟ್‍ನಲ್ಲಿ,೪ ಗಂಟೆಗಳ ಕಾಲವಾದ ಪ್ರತಿವಾದಗಳು ನಡೆದವು. ಇವೆಲ್ಲವನ್ನೂ ಆಲಿಸಿದ ಸುಪ್ರೀಂ ಕೋರ್ಟ್‍ನಲ್ಲಿ ತ್ರಿಸದಸ್ಯ ಸಾಂವಿಧಾನಿಕ ಪೀಠವು ನಾಳೆ ಬೆಳಗ್ಗೆ ೧೦:೩೦ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದೆ. ಹಾಗೂ ನಾಳೆ ಬೆಳಿಗ್ಗವರೆಗೆ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದ್ದು, ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯುವಂತೆ ಕೋರ್ಟ್ ಆದೇಶಿಸಿದೆ.
ತಾವು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ೧೫ ಅತೃಪ್ತ ಶಾಸಕರು ಸ್ಪೀಕರ್ ವಿರುದ್ಧ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು. ಹಾಗೆಯೇ, ಮಂತ್ರಿಯಾಗುವ ಮತ್ತಿತರ ಆಮಿಷಗಳಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ.
ಅವರನ್ನು ಅನರ್ಹಗೊಳಿಸಬೇಕೆಂದು ಮುಖ್ಯಮಂತ್ರಿಗಳೂ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ಸ್ಪೀಕರ್ ಅವರ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಸ್ಪೀಕರ್ ಕಡೆಯಿಂದಲೂ ಸುಪ್ರೀಂ ಕೋರ್ಟ್‍ಗೆ ಅರ್ಜಿ ಹೋಗಿತ್ತು.
ನಾಳೆ ಬೆಳಗ್ಗಿನ ತೀರ್ಪಿಗಾಗಿ ಸಿಎಂ ಸೇರಿ ಅತೃಪ್ತ ಶಾಸಕರು ಕುತೂಹಲದಿಂದ ಕಾಯುತ್ತಿದ್ದಾರೆ.