Tuesday, January 21, 2025
ಸುದ್ದಿ

ಗುರುಪೂರ್ಣಿಮೆಯಂದು ಪೇಜಾವರ ಶ್ರೀಪಾದರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತೇ..? – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರದ ಶ್ರೇಷ್ಠ ಸಂತ ಪೇಜಾವರ ಶ್ರೀಗಳನ್ನು ಭೇಟಿ ಆಗಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ಟ್ವೀಟರ್ ಹಾಗೂ ಫೇಸ್ಬುಕ್ ನಲ್ಲಿ ಮೋದಿ ಭೇಟಿ ಕುರಿತು ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ಮೋದಿ ಅವರು ಪೇಜಾವರ ಶ್ರೀಗಳನ್ನು ಬರಮಾಡಿಕೊಂಡು ಅವರ ಜೊತೆ ಕೆಲ ಹೊತ್ತು ಕಾಲ ಕಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಅವರು ಶ್ರೀಗಳನ್ನು ಭೇಟಿ ಮಾಡಿರುವ ಫೋಟೋಗಳನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ಈ ವಿಶೇಷ ದಿನ ಇನ್ನಷ್ಟು ವಿಶೇಷವಾಗಿದೆ. ಗುರು ಪೂರ್ಣಿಮಾ ದಿನದಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಷ ತೀರ್ಥ ಸ್ವಾಮೀಜಿ ಅವರ ಜೊತೆ ಕಾಲ ಕಳೆದಿದ್ದಕ್ಕೆ ಹೆಮ್ಮೆಯಾಯಿತು. ಅವರಿಂದ ಕಲಿಯುವುದು ಹಾಗೂ ಅವರ ಅಲೋಚನೆಗಳ ಬಗ್ಗೆ ಕೇಳುವುದು ಒಳ್ಳೆಯ ಅನುಭವ ಎಂದು ಟ್ವೀಟ್ ಮಾಡಿದ್ದಾರೆ.

ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.