Tuesday, January 21, 2025
ಸಿನಿಮಾ

ದಿಗಂತ್‍ಗೆ ದೊಡ್ಡ ಬ್ರೇಕ್ ನೀಡಲಿದೆಯಾ ಪವರ್ ಸ್ಟಾರ್ ಸಿನೆಮಾ – ಕಹಳೆ ನ್ಯೂಸ್

ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಮತ್ತು ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್‍ನ ‘ಯುವರತ್ನ’ ಚಿತ್ರಕ್ಕೆ ದಿನಂದಿಂದ ದಿನಕ್ಕೆ ಪೋಷಕನಟರನ್ನು ಸೇರಿಸಿಕೊಳ್ಳುತ್ತಿದ್ದಾರೆ ನಿರ್ದೇಶಕ ಸಂತೋಷ್.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊನ್ನೆ ತಾನೆ ಪ್ರಕಾಶ್‍ರಾಜ್‍ರವರನ್ನು ಚಿತ್ರತಂಡಕ್ಕೆ ಸೇರಿಸಿಕೊಂಡಿದ್ದ ಚಿತ್ರತಂಡ ಇದೀಗ, ಕನ್ನಡದ ಸ್ಟಾರ್ ನಟರೊಬ್ಬರನ್ನು ‘ಯುವರತ್ನ’ದಲ್ಲಿ ವಿಶೇಷ ಪಾತ್ರಕ್ಕಾಗಿ ಬರಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಈ ಚಿತ್ರದಲ್ಲಿ ಪುನೀತ್‍ಗೆ ಪೋಷಕ ನಟರಾಗಿ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಖಳ ನಟ ಡಾಲಿ ಧನಂಜಯ್ ಜೊತೆಗೆ ನಾಯಕ-ಖಳ ಮತ್ತು ಪೋಷಕ ನಟ ವಸಿಸ್ಠ ಸಿಂಹ ಇದ್ದಾರೆ. ಇದೀಗ ವಿಶೇಷ ಪಾತ್ರಕ್ಕೆ ದಿಗಂತ್‍ರನ್ನು ಕರೆತಂದಿರುವ ಚಿತ್ರತಂಡ, ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ದಿಗಂತ್ ಓರ್ವ ನಾಯಕ ನಟನಾಗಿದ್ದರೂ ಅವರಿಗೆ ಗೆಲುವು ತಂದುಕೊಟ್ಟ ಚಿತ್ರಗಳು ಬಹುತೇಕ ಬಹುತಾರಾಗಣ ಚಿತ್ರಗಳು ಎಂಬುದು ವಿಶೇಷ. ಅವುಗಳು ಯಾವುದೆಂದರೆ ಮುಂಗಾರು ಮಳೆ, ಗಾಳಿಪಟ ಮತ್ತು ಚೌಕ.

ಹಾಗಾಗಿ ‘ಯುವರತ್ನ’ ಚಿತ್ರವು ದಿಗಂತ್ ಚಿತ್ರಬದುಕಿಗೆ ಬಹುದೊಡ್ಡ ಗೆಲುವನ್ನು ತಂದುಕೊಡಬಹುದು ಎಂಬುದು ಸಿನಿ ಪಂಡಿತರ ಅಭಿಪ್ರಾಯ.