Friday, September 20, 2024
ಸುದ್ದಿ

ಭಯೋತ್ಪಾದಕರ ಸೃಷ್ಟಿಸುತ್ತಿರುವ ಮದರಸಾಗಳನ್ನು ಮುಚ್ಚಿ

Highlights
ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿ ನಾಯಿಕೊಡೆಗಳಂತಿರುವ ಈ ಮದರಸಾಗಳಿಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಯೋತ್ಪದನಾ ಸಂಘಟನೆಗಳಿಂದ ನೆರವು ಹರಿದು ಬರುತ್ತಿದೆ’

ಲಖನೌ : ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಮುಚ್ಚಬೇಕೆಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿರುವ ಅವರು, ಈ ರೀತಿಯ ಇಸ್ಲಾಮಿಕ್ ಶಾಲೆಗಳು ಶಿಕ್ಷಣವನ್ನು ಮುಂದುವರೆಸಬೇಕಾದರೆ ಸಿಬಿಎಸ್ಇ ಹಾಗೂ ಐಸಿಎಸ್ಸಿ’ಯಿಂದ ಮಾನ್ಯತೆ ಪಡೆದುಕೊಳ್ಳಬೇಕು. ಮಾನ್ಯತೆ ಪಡೆದುಕೊಳ್ಳದಿರುವ ಎಲ್ಲ ಮುಚ್ಚಿ ಎಂದು ತಿಳಿಸಿದ್ದಾರೆ.
ದೆಶದಲ್ಲಿರುವ ಬಹುತೇಕ ಮದರಸಾಗಳು ಹೆಚ್ಚು ಗುರುತಿಸಿಕೊಂಡಿಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿ ನಾಯಿಕೊಡೆಗಳಂತಿರುವ ಈ ಮದರಸಾಗಳಿಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಯೋತ್ಪದನಾ ಸಂಘಟನೆಗಳಿಂದ ನೆರವು ಹರಿದು ಬರುತ್ತಿದೆ’ ಎಂದು ರಿಜ್ವಿ ಆಪಾದಿಸಿದ್ದಾರೆ.
ಅತೀ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ರೀತಿಯ ಮದರಸಾಗಳಲ್ಲಿ ಬಹುತೇಕರು ಉರ್ದು ಅನುವಾದಕರು ಅಥವಾ ಟೈಪಿಸ್ಟ್’ಗಳಾಗಿ ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಈ ರೀತಿಯ ಸಂಸ್ಥೆಗಳು ಐಸಿಎಸ್ಸಿ ಹಾಗೂ ಸಿಬಿಎಸ್ಸಿ’ಯಿಂದ ಮಾನ್ಯತೆ ಪಡೆಯುವುದರ ಜೊತೆ ಮುಸ್ಲಿಂಯೇತರ ವಿದ್ಯಾರ್ಥಿಗಳಿಗೂ ವ್ಯಾಸಂಗ ಮಾಡಲು ಅವಕಾಶ ನೀಡಬೇಕು. ಈ ಬಗ್ಗೆ ಪ್ರಧಾನಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ರಿಜ್ವಿ ಆಪಾದನೆಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕ್ತಾರ’ ಖಲೀಲೂರ್ ರೆಹಮಾನ್ ಸಜ್ಜದ್ ನಾಮನಿ’ ಮದರಸಾಗಳು ಸ್ವತಂತ್ರ ಸಂಗ್ರಾಮದಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಇವುಗಳನ್ನು ಪ್ರಶ್ನಿಸುವ ಮೂಲಕ ರಿಜ್ವಿ ಅವರು ಅಪಮಾನ ಮಾಡುತ್ತಿದ್ದಾರೆ’ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response