ನವದೆಹಲಿ: ಮರಳಿ ಮತಪತ್ರ ತರಬೇಕು ಎಂದು ಒತ್ತಾಯಿಸಿ ಆಗಸ್ಟ್ 9ರಂದು ದೇಶವ್ಯಾಪಿ ಇವಿಎಂ ಭಾರತ ಬಿಟ್ಟು ತೊಲಗು ಜಾಥಾ ಆಯೋಜಿಸಲಾಗಿದೆ. ಇವಿಎಂ ವಿರೋಧಿ ರಾಷ್ಟ್ರೀಯ ಜನಾಂದೋಲನ ಸಂಘಟನೆ, ಭಾರತ ಬಿಟ್ಟು ತೊಲಗಿ ಚಳವಳಿಯ ರೀತಿಯಲ್ಲಿ, ಇವಿಎಂ ಭಾರತ ಬಿಟ್ಟು ತೊಲಗು ಜಾಥಾ ಹಮ್ಮಿಕೊಂಡಿದೆ.
1942ರ ಆಗಸ್ಟ್ 9ರಂದು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾಗಿತ್ತು. ಈ ವರ್ಷ ಆಗಸ್ಟ್ 9ರಂದು ಇವಿಎಂ ವಿರೋಧಿ, ರಾಷ್ಟ್ರೀಯ ಜನಾಂದೋಲನ ಸಂಘಟನೆಯಿಂದ, ಇವಿಎಂ ಭಾರತ ಬಿಟ್ಟು ತೊಲಗಿ ಜಾಥಾವನ್ನು, ರಾಷ್ಟ್ರವ್ಯಾಪಿ ನಡೆಸಲು ತೀರ್ಮಾನಿಸಲಾಗಿದೆ.
ಸಾಮಾಜಿಕ ಹೋರಾಟಗಾರರಾದ ರವಿ ಭಿಲಾಸೆ, ಫಿರೋಜ್ ಮಿಥಿಬೋರ್, ಡಾ. ಸುನಿಲಂ ಮೊದಲಾದವರು ಇವಿಎಂ ವಿರೋಧಿ ರಾಷ್ಟ್ರೀಯ ಜನಾಂದೋಲನ ಸಂಘಟನೆಯಿಂದ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ಹಾಗೂ ವಿವಿಧ ಪಕ್ಷಗಳ ಮುಖಂಡರಾದ ಡಿ. ರಾಜಾ, ನೀಲೋತ್ಕಲ್ ಬಸು, ನಾನಾ ಪಟೋಲೆ, ಡ್ಯಾನಿಷ್ ಅಲಿ, ಜಾವೇದ್ ಅಲಿ ಖಾನ್, ಕೋಲ್ಸೆ ಪಟೇಲ್ ಮೊದಲಾದವರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಆಗಸ್ಟ್ 9ರಂದು ಇವಿಎಂ ಭಾರತ ಬಿಟ್ಟು ತೊಲಗಿ ಜಾಥಾ ಆಯೋಜಿಸಲು ತೀರ್ಮಾನಿಸಲಾಗಿದೆ.