ದಿ ಹೇಗ್ : ಭಾರತದ ಗೂಢಾಚಾರಿ ಎಂದು ತಪ್ಪಾಗಿ ಅರ್ಥೈಸಿ ಕುಲಭೂಷಣ್ ಜಾಧವ್‍ಗೆ ನೀಡಿರುವ ಗಲ್ಲು ಶಿಕ್ಷೆ ಕುರಿತು ಇಂದು ಅಂತಾರಾಷ್ಟ್ರೀಯ ಕೋರ್ಟ್ ಮಹತ್ವದ ಆದೇಶ ನೀಡಲಿದೆ. 2016ರಲ್ಲಿ ಪಾಕಿಸ್ತಾನ ಸೇನೆ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿತ್ತು. ದೇಶದ್ರೋಹ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಜಾಧವ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 2016ರ ಏಪ್ರಿಲ್‍ನಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಜಾಧವ್‍ಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಭಾರತ ಸರ್ಕಾರವು ದಿ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಬುಧವಾರ ನೀಡುವ ತೀರ್ಪು ಭಾರತ ಹಾಗೂ ಪಾಕಿಸ್ತಾನಕ್ಕೆ ಮಹತ್ವದ್ದಾಗಿದೆ. ಅಂತಾರಾಷ್ಟ್ರೀಯ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು ಎಂಬ ನಿಯಮವೇನಿಲ್ಲ ಆದರೆ ಆದೇಶ ಪಾಲಿಸದಿದ್ದರೆ ರಾಜತಾಂತ್ರಿಕವಾಗಿ ಆದೇಶಕ್ಕೆ ಹಿನ್ನಡೆಯಾಗಲಿದೆ.
ಕುಲಭೂಷಣ್ ಜಾಧವ್ ಮರಣದಂಡನೆ ರದ್ದಾಗಲಿದೆ ಹಾಗೂ ಭಾರತಕ್ಕೆ ಅವರು ವಾಪಸಾಗುವಂತೆ ಆದೇಶವಾಗುವ ನಿರೀಕ್ಷೆಯನ್ನು ಭಾರತ ಸರ್ಕಾರ ಹಾಗೂ ಕೋಟ್ಯಂತರ ಜನ ಹೊಂದಿದ್ದಾರೆ.