Monday, January 20, 2025
ಸುದ್ದಿ

ಅಸ್ಸಾಂ ಭೀಕರ ಪ್ರವಾಹಕ್ಕೆ ಅರ್ಧ ತಿಂಗಳ ಸಂಬಳವನ್ನು ಪ್ರವಾಹ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ ಹಿಮಾ ದಾಸ್‌ – ಕಹಳೆ ನ್ಯೂಸ್

TAMPERE, FINLAND - JULY 12: Hima Das of India celebrates winning gold in the final of the women's 400m on day three of The IAAF World U20 Championships on July 12, 2018 in Tampere, Finland. (Photo by Ben Hoskins/Getty Images for IAAF)

ಗುವಾಹಟಿ: ಅಸ್ಸಾಂ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ತಾರಾ ಅಥ್ಲೀಟ್‌ ಹಿಮಾ ದಾಸ್‌ ತಮ್ಮ ಅರ್ಧ ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

ಟ್ವೀಟರ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಹಿಮಾ, ಕಾರ್ಪೋರೇಟ್‌ ಸಂಸ್ಥೆ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬರೂ ನೆರವು ನೀಡುವಂತೆ ಕೋರಿದ್ದಾರೆ. ಹಿಮಾ, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಯುವ ಅಥ್ಲೀಟ್‌ನ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು