Monday, January 20, 2025
ಸುದ್ದಿ

ಜೀವನವಿಡೀ ಉಳಿತಾಯ ಮಾಡಿದ 1 ಕೋಟಿಯನ್ನು ರಕ್ಷಣಾ ಇಲಾಖೆಗೆ ನೀಡಿದ ಮಾಜಿ ಯೋಧ – ಕಹಳೆ ನ್ಯೂಸ್

ಒಂದು ಮಾತಿದೆ, ಸೈನಿಕನನ್ನ ಸೇನೆಯಿಂದ ತೆಗೆದುಹಾಕಬಹುದು. ಆದ್ರೆ ಸೈನಿಕನಲ್ಲಿ ಅಡಗಿರುವ ಆ ಯೋಧನನನ್ನು ಎಂದೂ ತೆಗೆದು ಹಾಕಲಾಗದು ಅಂತ. ಆ ಮಾತಿಗೆ ನಿದರ್ಶನ ಎನ್ನುವಂತೆ 74 ವರ್ಷದ ಸಿಬಿಆರ್ ಪ್ರಸಾದ್ ಎನ್ನುವ ಮಾಜಿ ವಾಯುಸೇನಾ ಅಧಿಕಾರಿ, ರಕ್ಷಣಾ ಇಲಾಖೆಗೆ ತಮ್ಮ ಜೀವನವಿಡೀ ಉಳಿತಾಯ ಮಾಡಿದ್ದ 1 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ.

ನಾನು 9 ವರ್ಷಗಳ ಕಾಲ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದೆ. ನಂತರ ನನಗೆ ಭಾರತೀಯ ರೇಲ್ವೆ ಇಲಾಖೆಯಲ್ಲಿ ಒಳ್ಳೆಯ ಉದ್ಯೋಗ ಅರಸಿ ಬಂತು. ಆದ್ರೆ ನಾನು ಹೋಗಲಿಲ್ಲ. ಅದರ ಬದಲಾಗಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿದೆ. ಅದೃಷ್ಟವಶಾತ್ ಅದು ನನ್ನ ಕೈ ಹಿಡಿಯಿತು. ನನ್ನ ಎಲ್ಲಾ ಕೌಟುಂಬಿಕ ಜವಾಬ್ದಾರಿ ನಿರ್ವಹಿಸಿದ ಮೇಲೆ ನಾನು ಸೇವೆ ಸಲ್ಲಿಸಿದ ಸೇನೆಗೆ ಏನಾದರೂ ಮಾಡಬೇಕು ಅನ್ನೋ ತುಡಿತ ಹುಟ್ಟಿತು. ಹೀಗಾಗಿ ನಾನು ಉಳಿತಾಯ ಮಾಡಿದ್ದ 1.08 ಕೋಟಿ ರೂಪಾಯಿಯನ್ನ ಸೇನೆಗೆ ನೀಡಿದ್ದೇನೆ ಅಂತ ಪ್ರಸಾದ್ ಹೇಳಿದ್ದಾರೆ. ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‍ಗೆ 1.08 ಕೋಟಿ ರೂಪಾಯಿಯ ಚೆಕ್ ನೀಡಿದ ಪ್ರಸಾದ್, ಇದು ನನ್ನ ಪುಟ್ಟ ಕಾಣಿಕೆ ಅಂತ ಹೇಳಿದ್ದಾರೆ. ನಿಜವಾಗಲು ಇಂಥವರು ಭಾರತೀಯ ಹೆಮ್ಮೆಯ ಪುತ್ರರು ಹೌದು.. ನಿಮ್ಮ ಈ ಅಗಾಧ ಸೇವೆಗೆ ಸೆಲ್ಯೂಟ್ ಪ್ರಸಾದ್ ಅವರೇ..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು