Saturday, November 23, 2024
ಸುದ್ದಿ

ಸರಸ್ವತೀ ವಿದ್ಯಾಲಯ ಪದವಿಪೂರ್ವ ಹಾಗೂ ಪ್ರೌಢ ವಿಭಾಗದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ನಮ್ಮ ದೇಶದಲ್ಲಿ ಋಷಿ ಪರಂಪರೆಯಲ್ಲಿ ಅಪಾರ ಜ್ಞಾನ ಹಾಗೂ ಅವರ ಬಗ್ಗೆ ಗೌರವದ ಭಾವವಿತ್ತು. ಜೊತೆಗೆ ಕೃಷಿ ಪರಂಪರೆ ಕೂಡ ಹೇರಳವಾಗಿ ಆರೋಗ್ಯಕ್ಕೆ ಪೂರಕವಾಗುವ ರೀತಿಯಲ್ಲಿ ಸಮೃದ್ಧವಾಗಿತ್ತು ಆದರೆ ಇವೆರಡರ ಬಗ್ಗೆ ಕೂಡ ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯ ಎಂದು ಸರಸ್ವತೀ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕಡಬದ ಸರಸ್ವತೀ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾಲಯದಲ್ಲಿ ಅರಣ್ಯ ಇಲಾಖೆ ಪಂಜ ವಲಯ ಹಾಗೂ ಜೇಸಿಐ ಕಡಬ ಕದಂಬ ಇದರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಮಾತನಾಡಿದ ಅರಣ್ಯ ಉಪ ವಲಯಾಧಿಕಾರಿ ಶ್ರೀ ಸುನೀಲ್ ಕುಮಾರ್ ಕಾಡು ಹಾಗೂ ನಾಡಿನ ಸಮತೋಲನ ಕಾಯ್ದುಕೊಳ್ಳುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಪರಿಸರ ಕ್ರಾಂತಿಯೇ ಆಗಬೇಕಿದೆ ಎಂದರು. ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ JFM ನಾಗರಾಜ್ ಎನ್ ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೇಸಿಐ ಕಡಬ ಕದಂಬದ ಅಧ್ಯಕ್ಷರಾದ Jc HGF ರವಿಚಂದ್ರ ಪಡುಬೆಟ್ಟು ಅವರು ಅರಣ್ಯ ಇಲಾಖೆಯ ವತಿಯಿಂದ ಪರಿಸರ ರಕ್ಷಣೆಗೆ ಸಂಬಂಧಿಸಿದ ಯೋಜನೆಗಳಿಗೆ ನಾಗರೀಕರ ಸಹಕಾರ ಕೂಡ ಅಗತ್ಯ. ಪ್ರತಿನಿತ್ಯ ರಸ್ತೆಯಲ್ಲಿ ಮುಗ್ಧ ಪ್ರಾಣಿಗಳು ಸಾವಿಗೀಡಾಗುತ್ತಿರುವುದಕ್ಕೆ ಪರಿಸರ ದುಷ್ಪರಿಣಾಮ ಕಾರಣ ಎಂದು ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆಯ ವತಿಯಿಂದ 250 ಗಿಡಗಳನ್ನು ನೀಡಿ ಸಹಕರಿಸಿದರು. ವೇದಿಕೆಯಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಗಿಡವನ್ನು ಶ್ರೀ ಸುನೀಲ್ ಅವರು ಹಸ್ತಾಂತರಿಸಿದರು.

ವೇದಿಕೆಯಲ್ಲಿ ಪಂಜವಲಯ ಅರಣ್ಯ ರಕ್ಷಕರಾದ ಶ್ರೀ ಸುಬ್ರಹ್ಮಣ್ಯ ಗೌಡ, ಪ್ರೌಢ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶೈಲಶ್ರೀ ರೈ ಉಪಸ್ಥಿತರಿದ್ದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಸ್ವಾಗತಿಸಿ, ಜೇಸಿಐ ಕಡಬ ಕದಂಬದ ಕಾರ್ಯದರ್ಶಿ Jc HGF ಕಾಶೀನಾಥ್ ಗೋಗಟೆ ವಂದಿಸಿ, ಅಧ್ಯಕ್ಷರು ಕಾರ್ಯಕ್ರಮ ನಿರೂಪಿಸಿದರು.