Sunday, January 19, 2025
ಸಿನಿಮಾ

ದಿ ವಿಲನ್ ಚಿತ್ರದಿಂದ ಶೃತಿ ಹರಿಹರನ್ ಔಟ್!

 

Highlights
ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ‘ದಿ ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು (ಜ.11): ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ‘ದಿ ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ.
ಆದರೆ, ‘ದಿ ವಿಲನ್’ ಚಿತ್ರತಂಡದಿಂದ ಈಗಷ್ಟೆ ಬಂದಿರುವ ಮಾಹಿತಿ ಪ್ರಕಾರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಬೇಕಿದ್ದ ಶ್ರುತಿ ಹರಿಹರನ್ ಚಿತ್ರದಿಂದ ಆಚೆ ಬಂದಿದ್ದಾರೆ. ಅವರ ಪಾತ್ರವನ್ನು ಸದ್ದಿಲ್ಲದೆ ನಿರ್ದೇಶಕ ಪ್ರೇಮ್ ಅವರು ಡಿಲಿಟ್ ಮಾಡಿದ್ದಾರೆ.ಹಾಗೆ ನೋಡಿದರೆ ಶ್ರುತಿ ಹರಿಹರನ್ ಇನ್ನೂ ಚಿತ್ರೀಕರಣದಲ್ಲೇ ಪಾಲ್ಗೊಂಡಿಲ್ಲವಂತೆ. ಸಿನಿಮಾ ಸೆಟ್ಟೇರಿದಾಗ ಅವರ ಸುದ್ದಿ ಬಂತೇ ಹೊರತು, ‘ದಿ ವಿಲನ್’ ಚಿತ್ರೀಕರಣದಲ್ಲಿ ಪಾಲ್ಗೊಂಡ ಮಾಹಿತಿಗಳು ಇಲ್ಲ. ಅಂದಹಾಗೆ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಶ್ರುತಿ ಹರಿಹರನ್ ನಟಿಸಬೇಕಿತ್ತು. ಹಳ್ಳಿಯಲ್ಲಿ ನಟ ಶಿವರಾಜ್‌ಕುಮಾರ್ ಅವರನ್ನು ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಳ್ಳುವ ಪಾತ್ರ ಅವರದ್ದಾಗಿತ್ತು. ಚಿಕ್ಕ ಪಾತ್ರವಾದರೂ ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ಶ್ರುತಿ ಹರಿಹರನ್ ಒಪ್ಪಿಕೊಂಡಿದ್ದರಂತೆ. ಆದರೆ, ಈಗಾಗಲೇ ಸಿನಿಮಾ ಸಾಕಷ್ಟು ಉದ್ದ ಇರುವ ಕಾರಣ ಶ್ರುತಿ ಹರಿಹರನ್ ಪಾತ್ರವನ್ನು ಚಿತ್ರೀಕರಣ ಮಾಡಿಕೊಳ್ಳುವ ಮೊದಲೇ ನಿರ್ದೇಶಕರೇ ಎಡಿಟ್ ಮಾಡಿಕೊಂಡಿದ್ದಾರೆ. ಆ ಮೂಲಕ ‘ದಿ ವಿಲನ್’ ಚಿತ್ರದಿಂದ ನಟಿ ಶ್ರುತಿ ಹರಿಹರನ್ ಸೈಲೆಂಟ್ ಆಗಿ ಹೊರಗೆ ಬಂದಿದ್ದಾರೆ.
ದೇವರಾಜ್-ಶರಣ್ಯ ಜೋಡಿ: ಅಂದಹಾಗೆ ‘ದಿ ವಿಲನ್’ ಚಿತ್ರದ ನಾಯಕ ನಟರ ತಂದೆ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ದೇವರಾಜ್ ಹಾಗೂ ಶರಣ್ಯ ಅವರು. ಅರುಂಧತಿ ನಾಗ್ ಅವರನ್ನೇ ಗಮನದಲ್ಲಿಟ್ಟುಕೊಂಡು ನಿರ್ದೇಶಕರು ತಾಯಿ ಪಾತ್ರವನ್ನು ರೂಪಿಸಿದ್ದರು. ಆದರೆ, ಯಾಕೋ ಅರುಂಧತಿ ಜಾಗದಲ್ಲಿ ತಮಿಳಿನ ಶರಣ್ಯ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ತಾಯಿ ಪಾತ್ರಕ್ಕೆ ಮಹತ್ವ ಇದೆ. ತುಂಬಾ ಸೆಂಟಿಮೆಂಟ್ ದೃಶ್ಯಗಳು ಇವೆ. ಹೀಗಾಗಿ ನಟನೆಯಲ್ಲಿ ಹೆಚ್ಚು ಪಳಗಿರುವ ಪೋಷಕ ನಟಿಗಾಗಿ ಹುಡುಕಾಡಿದವರಿಗೆ ಶರಣ್ಯ ಅವರೇ ಅರುಂಧತಿ ನಾಗ್ ಅವರ ಜಾಗವನ್ನು ತುಂಬಿಸಿದ್ದಾರಂತೆ. ಮುಂದಿನ ವಾರ ದೇವರಾಜ್ ಹಾಗೂ ಶರಣ್ಯ ಜೋಡಿಯ ದೃಶ್ಯಗಳ ಚಿತ್ರೀಕರಣವನ್ನು ಕನಕಪುರದ ಹಳ್ಳಿ ಸೆಟ್‌ನಲ್ಲಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕರದ್ದು. ವರ ಮಹಾಲಕ್ಷ್ಮೀ ಹಬ್ಬಕ್ಕೆ ವಿಲನ್ ಅಬ್ಬರ: ಪ್ರೇಮ್ ಹಾಗೂ ಸಿ ಆರ್. ಮನೋಹರ್ ಪ್ಲಾನ್ ಮಾಡಿಕೊಂಡಿರುವಂತೆ ‘ದಿ ವಿಲನ್’ ಚಿತ್ರವನ್ನು ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾಕೆಂದರೆ 10 ದಿನ ಗ್ರಾಫಿಕ್ಸ್ ಕೆಲಸದ ಜತೆಗೆ ೨೦ ರಿಂದ ೨೫ ದಿನಗಳ ಕಾಲ ಚಿತ್ರೀಕರಣ ನಡೆಯಬೇಕಿದೆ. ವಿದೇಶದಲ್ಲಿ ನಡೆಯಬೇಕಿದ್ದ ಹಾಡುಗಳ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ಚಿತ್ರೀಕರಣ ಮುಗಿಯುವುದು ತಡವಾಗುತ್ತಿದೆ ಎನ್ನುವ ಕಾರಣಕ್ಕೆ ವಿದೇಶಿ ಪಯಣಕ್ಕೆ ಚಿತ್ರತಂಡ ಕತ್ತರಿ ಹಾಕಿಕೊಂಡಿದೆ. ಈ ಎಲ್ಲ ಕೆಲಸಗಳನ್ನು ಮುಗಿಸಿ ಚಿತ್ರೀಕರಣ ಮುಕ್ತಾಯ ಮಾಡುವ ಹೊತ್ತಿಗೆ ‘ದಿ ವಿಲನ್’ ಚಿತ್ರದ ಬಿಡುಗಡೆಯ ಭಾಗ್ಯ ದೊರೆಯುವುದು ವರಮಹಾಲಕ್ಷ್ಮೀ ಹಬ್ಬದಂದು.
ಸದ್ಯ ಈಗ ನಿರ್ದೇಶಕ ಪ್ರೇಮ್ ಅವರ ತಂಡ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response