ಲಖನೌ: ಮುಸಲ್ಮಾನರು ರಸ್ತೆ ನಡುವೆ ನಮಾಜ್ ಮಾಡುವುದನ್ನು ವಿರೋಧಿಸಿ, ರಸ್ತೆಯಲ್ಲಿಯೇ ಹನುಮಾನ್ ಚಾಲಿಸ ಪಠಣ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಿಂದು ಯುವ ವಾಹಿನಿ ನಡು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿದ್ದು, ಒಂದು ಗಂಟೆಗಿಂತಲೂ ಹೆಚ್ಚು ಕಾಲ ಹನುಮಾನ್ ಚಾಲಿಸ್ ಪಠಣ ಮಾಡಿದ್ದಾರೆ. ನಡು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ಮುಸ್ಲಿಂ ಬಾಂಧವರು ನಿಲ್ಲಿಸುವವರೆಗೂ ಪ್ರತಿ ಮಂಗಳವಾರ ತಾವೂ ನಡು ರಸ್ತೆಯಲ್ಲೇ ಹನುಮಾನ್ ಚಾಲಿಸ ಪಠಣ ಮಾಡುವುದನ್ನು ಮುಂದುವರೆಸುವುದಾಗಿ ಹಿಂದು ಯುವ ವಾಹಿನಿ ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
ಮುಸ್ಲಿಮರು ಪ್ರತಿ ಶುಕ್ರವಾರದಂದು ನಡು ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಸಮಸ್ಯೆ ಉಂಟಾಗುತ್ತಿದೆ. ಅವರು ಈ ಅಭ್ಯಾಸವನ್ನು ಬಿಟ್ಟರೆ ನಾವೂ ಹನುಮಾನ್ ಚಾಲಿಸಾ ಪಠಣ ಮಾಡುವುದು ನಿಲ್ಲಿಸುವುದಾಗಿ ಹೇಳಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಮೌನ ವಹಿಸಿದ್ದು, ನಡು ರಸ್ತೆಯಲ್ಲಿ ನಮಾಜ್ ಮಾಡುವುದರ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ. ಆದ್ದರಿಂದ ಈ ವಿಷಯದಲ್ಲಿ ನಮ್ಮ ಮಧ್ಯಪ್ರವೇಶ ಇಲ್ಲ ಎಂದು ಹೇಳಿದ್ದಾರೆ.