Saturday, January 25, 2025
ಸುದ್ದಿ

ಭಾವಪೂರ್ಣ ವಾತಾವರಣದಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಪ್ಪಿನಂಗಡಿಯ ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪರಂಪರಾ ಪೂಜೆ ಹಾಗೂ ಸಾಯಂಕಾಲ ಸಭಾ ಕಾರ್ಯಕ್ರಮ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ ಸನಾತನ ಸಂಸ್ಥೆಯ ಗುರು ಪರಂಪರೆಯ ಪ್ರತಿಮಾ ಪೂಜೆಯನ್ನು ಮಾಡಲಾಯಿತು. ಗುರುಪರಂಪರಾ ಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ದಯಾನಂದ ಹೆಗ್ಡೆ, ಮಲ್ಲಿಕಾ ದಯಾನಂದ ಹೆಗ್ಡೆ ಇವರು ಮಾಡಿದರು. ಗುರುಪರಂಪರಾ ಪೂಜೆಯ ಪೌರೋಹಿತ್ಯವನ್ನು ಸುಬ್ರಹ್ಮಣ್ಯ ಪ್ರಸಾದ್ ಇವರು ವಹಿಸಿದ್ದರು. ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಅದ್ವಿತೀಯ ಗುಣಗಳ ಪರಿಚಯದ ಬಗ್ಗೆ ಪ್ರತಿಮಾ ಪ್ರಭು ಮಾರ್ಗದರ್ಶನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳದ ಹಿಂದುತ್ವವಾದಿ ನ್ಯಾಯವಾದಿ ಚಂದ್ರಶೇಖರ ರಾವ್ ಮಾತನಾಡುತ್ತಾ, ನಮ್ಮ ಆದರ್ಶ ಇತಿಹಾಸವನ್ನು ಅಭ್ಯಾಸ ಮಾಡಿದಾಗ, ಛತ್ರಪತಿ ಶಿವಾಜಿಯು 240 ಯುದ್ಧಗಳಲ್ಲಿ ಸೋಲಲಿಲ್ಲ. ಇದು ಹಿಂದೂ ಧರ್ಮದ ವಿದ್ಯೆಯ ಶ್ರೇಷ್ಠತೆಯಾಗಿದೆ. ಗ್ರಾಮ, ಗೋವು, ಗಂಗಾಜಲ, ಗಾಯತ್ರಿ ಮಂತ್ರ ಇದು ಹಿಂದಿನ ಕಾಲದ 4ಜಿ ಆಗಿತ್ತು. ಇದರಿಂದ ಇಡೀ ದೇಶವೇ ಸಂಪದ್ಭರಿತ, ಸ್ವಾವಲಂಬನೆಯ ದಾರಿಯಲ್ಲಿತ್ತು. ಆದರೆ ಇಂದು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪಾಶ್ಚಿಮಾತ್ಯರ ಕಲ್ಮಶಗಳು ತುಂಬಿಕೊಂಡು ಭಾರತವು ಧರ್ಮದಿಂದ ದೂರವಾಗುತ್ತಿದೆ. ನಮ್ಮ ಆಡಳಿತದಲ್ಲಿ ನಾವು ಪಾಶ್ಚಿಮಾತ್ಯರ ಗುಲಾಮಗಿರಿಯಲ್ಲಿ ಇದ್ದೇವೆ. ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಿದೆ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಆನಂದ ಗೌಡ ಮಾತನಾಡಿ, ಭಾರತೀಯ ಸಂವಿಧಾನವು “ಸೆಕ್ಯುಲರ್” ಆಗಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಅಸಾಧ್ಯ” ಎಂದು ಬುದ್ಧಿಜೀವಿಗಳು ಪ್ರಸಾರ ಮಾಡುತಿದ್ದಾರೆ. ಈ ಅಪಪ್ರಚಾರವನ್ನು ನಿಲ್ಲಿಸಲು ಅದರ ವಾಸ್ತವಿಕತೆಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಕಾರ್ಯಕ್ರಮ ನಡೆದ ಸಭಾಗೃಹದಲ್ಲಿ ರಾಷ್ಟ್ರ-ಧರ್ಮ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದ ವೀಡಿಯೋ ಪ್ರದರ್ಶನ, ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು. ಹಾಗೆಯೇ ಸನಾತನ ನಿರ್ಮಿತ ಧಾರ್ಮಿಕ ಗ್ರಂಥಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಏರ್ಪಡಿಸಲಾಗಿತ್ತು.

ದೇವರಮಂಟಪದಲ್ಲಿ ಪೂಜಾ ಸಾಮಾಗ್ರಿಗಳನ್ನು ಶಾಸ್ತ್ರಾನುಸಾರ ಹೇಗೆ ಜೋಡಿಸಬೇಕು ಎಂಬುದರ ಕುರಿತು ತಯಾರಿಸಲಾಗಿದ್ದ ಪೂಜಾ ಮಂಟಪ ಎಲ್ಲರ ಗಮನಸೆಳೆಯಿತು.

ಕಾರ್ಯಕ್ರಮದಲ್ಲಿ ಉಮೇಶ್ ಶೆಣೈ, ಸ್ವರ್ಣೇಶ್, ದುರ್ಗಾಪ್ರಸಾದ್, ಜಗನ್ನಾಥ ಶೆಟ್ಟಿ ಉಪ್ಪಿನಂಗಡಿ, ಜಯಪ್ರಸಾದ್ ಕಡಮ್ಮಾಜೆ, ಡಾ. ನಿರಂಜನ್ ರೈ, ಶ್ರೀನಿವಾಸ ಪ್ರಭು, ವಿ.ಹಿಂ.ಪ. ಸತೀಶ್ ಪುತ್ತೂರು, ಯತೀಶ್ ಶೆಟ್ಟಿ ಸುವ್ಯ, ಸತೀಶ್ ಭಂಡಾರಿ ನೆಲ್ಲಿಕಟ್ಟೆ, ಆನಂದ ಗೌಡ ರಾಮಕುಂಜ ಮೊದಲಾದವರು ಉಪಸ್ಥಿತರಿದ್ದರು.