Friday, January 24, 2025
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‍ ನಲ್ಲಿ 12ನೇ ವರ್ಷದ ಜವಾಹರ್ ನವೋದಯ ತರಬೇತಿ ತರಗತಿ – ಕಹಳೆ ನ್ಯೂಸ್

ನೈತಿಕ ಶಿಕ್ಷಣವೇ ಧ್ಯೇಯವಾದರೆ, ದಾಖಲೆ ಮತ್ತು ಫಲಿತಾಂಶಗಳು ರಾರಾಜಿಸುತ್ತವೆ. ಶಿಕ್ಷಣದಲ್ಲಿ ಪ್ರಬುದ್ಧತೆಗಾಗಿ ವಿನೂತನಗಳ ಅಳವಡಿಸಿಕೊಳ್ಳುವಿಕೆಯೇ ಏಳ್ಗೆಯ ಮೆಟ್ಟಿಲು.

ಕಳೆದ ಹನ್ನೆರಡು ವರ್ಷಗಳಿಂದ ಪುತ್ತೂರಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ರೂಪುಗೊಳ್ಳುತ್ತಿರುವ ಹಾಗೂ ನಾವೀಣ್ಯತೆಯನ್ನು ಕಾಯ್ದುಕೊಂಡು ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿರುವ ವಿದ್ಯಾಸಂಸ್ಥೆಯೇ ಪ್ರಗತಿ ಸ್ಟಡಿ ಸೆಂಟರ್. ಸಂಸ್ಥೆಯು 2008ರಿಂದ ಜವಹಾರ್ ನವೋದಯ ಪ್ರವೇಶ ಪರೀಕ್ಷೆಯ ವಿದ್ಯಾರ್ಥಿ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿಯೊಂದಿಗೆ ಮಾದರಿ ಪರೀಕ್ಷೆಗಳನ್ನು ನಡೆಸುತ್ತಾ ಈವರೆಗೆ 110 ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿ, ಜವಾಹರ್ ನವೋದಯ ಶಾಲೆಗಳಿಗೆ ವಿದ್ಯಾಭ್ಯಾಸ ನಡೆಸಲು ಕಾರಣೀಭೂತವಾಗಿದೆ. ಹಾಗೂ 110 ವಿದ್ಯಾರ್ಥಿಗಳನ್ನು ಜವಾಹರ್ ನವೋದಯ ಶಾಲೆಗೆ ಕಳುಹಿಸಿದ ರಾಜ್ಯದ ಏಕೈಕ ಸಂಸ್ಥೆ ಎಂಬುದು ಪ್ರಗತಿ ಸ್ಟಡಿ ಸೆಂಟರ್‍ ಗೆ ಕೀರ್ತಿಯ ಮುಕುಟ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಸಂಸ್ಥೆಯು ಮಕ್ಕಳ ಭದ್ರತೆಗೆ ಪ್ರಾಮುಖ್ಯತೆ ನೀಡಿದ್ದು ಸಂಸ್ಥೆಯ ಪ್ರವೇಶದ್ವಾರದಿಂದ ಪ್ರಾರಂಭಿಸಿ, ಪ್ರತೀ ತರಗತಿಗಳಿಗೂ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಹೇಗೆ ನದಿಯೊಂದರ ಹುಟ್ಟು ಚಿಕ್ಕದಾಗಿರುತ್ತದೆಯೋ ಅದೇ ರೀತಿ ಪುಟ್ಟದಾಗಿ ಪ್ರಾರಂಭಗೊಂಡು ಬೆಳೆಯುತ್ತಾ, ಚಿಕ್ಕದೊಂದು ಮೈಲಿಗಲ್ಲನ್ನು ಸಾಧಿಸಿ ಪ್ರಗತಿಯ ಪಥದಲ್ಲಿ ಸಾಗುತ್ತಿರುವ ಸಂಸ್ಥೆ ಇಂದು ದಶ ವರ್ಷವನ್ನು ಪೂರೈಸುತ್ತಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶ ವಿದ್ಯಾರ್ಥಿಗಳ ಜೀವನದ ಆಶಾಕಿರಣವಾಗಿರುವ ಪ್ರಗತಿ ಹಲವಾರು ರೀತಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆಗಳನ್ನು ಕೊಡುವಲ್ಲಿ ಅಣಿಯಾಗುತ್ತಿದೆ. ಹೊಸ ಬದುಕು, ಹೊಸ ಭರವಸೆಗೆ ನಾಂದಿಹಾಡುತ್ತಿದೆ. ದಶಕ ಸಂಭ್ರಮವನ್ನು ಪೂರೈಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹಲವು ಪ್ರಥಮಗಳಿಗೆ ಭಾಜನವಾಗಿದೆ. ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಸಂಚಾಲಕರಾದ ಪಿ.ವಿ. ಗೋಕುಲ್‍ನಾಥ್‍ರವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

11ವರ್ಷಗಳಿಂದ ದಾಖಲೆಯ ಫಲಿತಾಂಶಗಳನ್ನು ಗಳಿಸುತ್ತಿದ್ದು, 2008ರಿಂದ 2015ರವರೆಗೆ ಏಳ್ಮುಡಿಯ ಶಾಖೆಗಳಲ್ಲಿ ನಡೆಸುತ್ತಿದ್ದು ತದನಂತರ ಪುತ್ತೂರಿನ ಹೃದಯಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ತರಗತಿಯನ್ನು ನಡೆಸುತ್ತಿದ್ದು, ಇದೀಗ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು ತನ್ನ ಇನ್ನೊಂದು ಶಾಖೆಯಾಗಿ ನೂತನ ಹಾಗೂ ಸಮರ್ಪಕ ಸಂಸ್ಥೆಯಾದ ಪ್ರಗತಿ ರೆಸಿಡೆನ್ಸಿಯಲ್ ಸ್ಟಡಿ ಸೆಂಟರ್ (PRSC) ಇಲ್ಲಿಯೂ ಹೊಸದಾಗಿ ನೂತನ ಜವಾಹರ್ ನವೋದಯ ತರಬೇತಿ ತರಗತಿ ಶಾಖೆಯನ್ನು ಪ್ರಾರಂಭಿಸುತ್ತಿದ್ದು, ಪ್ರತ್ಯೇಕ ಸುಸಜ್ಜಿತ ತರಗತಿ ಕೊಠಡಿಗಳ ಜೊತೆಗೆ ವಿಶಾಲವಾದ ಮೈದಾನ ಸಮೂಹ ಅಧ್ಯಯನಕ್ಕೆ ಅಗತ್ಯವಿರುವಂತಹ ಸೌಲಭ್ಯ, ಹಚ್ಚ ಹಸುರಿನ ಪರಿಸರದಲ್ಲಿ ವಿವಿಧ ರೀತಿಯ ಹಣ್ಣುಹಂಪಲುಗಳ ಮರಗಳು, ನವಿರಾದ ಹೂಬನ, ವಿವಿಧ ತರಕಾರಿಗಳ ಸಸ್ಯಗಳು, ನಮ್ಮ ವಿದ್ಯಾಸಂಸ್ಥೆಗಳಲ್ಲಿ ಅನುಭವಸ್ಥ ಹಾಗೂ ನುರಿತ ಪ್ರತಿಭಾವಂತ ಉಪನ್ಯಾಸಕ ತಂಡಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಒಟ್ಟಿನಲ್ಲಿ ಕಲಿಕೆಯಲ್ಲಿ ಪರಿಪೂರ್ಣವಾದ ಕಲಿಕೆಗೆ ಅವಕಾಶವನ್ನು ಕಲ್ಪಿಸುತ್ತಿದೆ. ಇದೀಗ ಹೆಮ್ಮರವಾಗಿ ಬೆಳೆದಿರುವ ಪ್ರಗತಿ ಸ್ಟಡಿ ಸೆಂಟರ್ ಮಗದೊಂದು ವಿನೂತನ ಪ್ರಯತ್ನಕ್ಕೆ ಕಾಲಿರಿಸಿದೆ. ನೂತನವಾಗಿ ನಗರದ ಹೊರಗೆ ಪ್ರಶಾಂತವಾದ ನಿಸರ್ಗ ಮಾತೆಯ ಮಡಿಲಿನಲ್ಲಿ, ಸುಸಜ್ಜಿತ ಸೌಕರ್ಯಗಳೊಂದಿಗೆ ಸುಂದರವಾದ ಕ್ಯಾಂಪಸ್ ತಲೆ ಎತ್ತುತ್ತಿದೆ. ಜೊತೆಗೆ ಒಂದಷ್ಟು ಹೊಸತನವನ್ನು ಹೊತ್ತು ತರುತ್ತಿದೆ. ಇಲ್ಲಿ ಸಂಸ್ಥೆಯು ಶಾಖೆಯನ್ನು ಪ್ರಾರಂಭಿಸುವ ಮೂಲ ಉದ್ದೇಶವೆಂದರೆ ಮುರ, ಕಬಕ, ವಿಟ್ಲ, ಮಾಣಿ, ಕಲ್ಲಡ್ಕ, ಕೆದಿಲ, ಗಡಿಯಾರ, ಕೊಡಿಪ್ಪಾಡಿ ಮುಂತಾದ ಸುತ್ತಮುತ್ತಲಿನ ಪರಿಸರದ ವಿದ್ಯಾರ್ಥಿಗಳಿಗೆ ಸುಲಭಕರವಾಗುವ ಸದುದ್ದೇಶದಿಂದ ಪ್ರಾರಂಭಿಸಲಾಗುತ್ತಿದೆ.

ಪುತ್ತೂರು ದಿನೇದಿನೇ ಆಧುನಿಕತೆಯೆಡೆಗೆ ಮುಖ ಮಾಡುತ್ತಿರುವ ಪುಟ್ಟ ನಗರ. ಅದರೂ ಗ್ರಾಮೀಣ ಸೊಗಡನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಈ ಪುಟ್ಟ ಊರು ತನ್ನದೇ ಆದ ರೀತಿಯಲ್ಲಿ ಶಿಕ್ಷಣ, ಸಂಸ್ಕೃತಿ, ಭಾವ-ಭಾವೈಕ್ಯದಲ್ಲಿ ದೇಶದಲ್ಲೇ ಗುರುತಿಸಿಕೊಂಡಿದೆ. ಈ ನಗರದ ಹೊರ ಭಾಗದಲ್ಲಿರುವ ಸುಮಾರು 5 ಕಿ.ಮೀ ನಷ್ಟು ದೂರವಿರುವ ಮಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಮಂಗಳೂರು ಕಡೆಯಿರುವ ಮುರ-ಪೋಳ್ಯ ಎಂಬಲ್ಲಿ ಲಕ್ಷ್ಮೀ ವೆಂಕಟರಮಣ ಮಠದ ಎದುರಿನ ಮುಖ್ಯ ರಸ್ತೆಯಿಂದ 50ಮೀಟರ್ ದೂರದಲ್ಲಿರುವ ಎರಡು ಎಕರೆ ವಿಸ್ತೀರ್ಣದ ಕ್ಯಾಂಪಸ್‍ನಲ್ಲಿ ಸುಸಜ್ಜಿತವಾದ ಮತ್ತು ಅತ್ಯಾಧುನಿಕ ರೀತಿಯ ಕಲಿಕಾ ಕೇಂದ್ರವೊಂದು ನಿರ್ಮಿತಗೊಂಡಿದೆ. ಅಷ್ಟೇ ಅಲ್ಲದೆ ವಿಶಾಲವಾದ ಅಡುಗೆ ಕೋಣೆ, ಉಪಾಹಾರ ಗೃಹ, ಸರ್ವಸೌಲಭ್ಯವಿರುವ ತರಗತಿ ಕೊಠಡಿಗಳು, ಕಲಿಕಾ ಪ್ರಾಯೋಗಿಕ ಕೊಠಡಿಗಳು((Smart Class), ಧ್ಯಾನ ಮಂದಿರ ಒಟ್ಟಿನಲ್ಲಿ ಕಲಿಕೆಯ ಜೊತೆಗೆ ಜೀವನ ಮೌಲ್ಯ ಹಾಗೂ ಶಿಸ್ತನ್ನು ಕಲಿಯಲು ಒದಗಿಸುತ್ತಿರುವ ಅತ್ಯಮೂಲ್ಯ ಅವಕಾಶವಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಬಿಸಿ ಬಿಸಿಯಾದ ಮದ್ಯಾಹ್ನದ ಭೋಜನ ಲಭ್ಯವಿದೆ.

ವಾರಾಂತ್ಯದಲ್ಲಿ ಮತ್ತು ದಸರಾ ರಜಾ ದಿನಗಳಲ್ಲಿ ತರಗತಿಗಳು ನಡೆಯಲಿದ್ದು ದಾಖಲಾತಿ ಆರಂಭಗೊಂಡಿದೆ. ಪ್ರಸ್ತುತ 5ನೇ ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಾಗಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ. ಹೇಮಲತಾ ಗೋಕುಲ್‍ನಾಥ್‍ರವರು ತಿಳಿಸಿರುತ್ತಾರೆ.