Friday, January 24, 2025
ಸುದ್ದಿ

ಕರಾವಳಿಯಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ – ಕಹಳೆ ನ್ಯೂಸ್

Mother measuring fever of her sick child. isolated on white background

ಮಂಗಳೂರು: ಒಂದು ವಾರದಿಂದ ಕರಾವಳಿಯ ಅನೇಕ ಕಡೆಗಳಲ್ಲಿ ಶೀತ, ಜ್ವರ, ತಲೆನೋವು ಸಮಸ್ಯೆ ಹೆಚ್ಚುತ್ತಿದ್ದು, ಕ್ಲಿನಿಕ್‍ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ವಾತಾವರಣದಲ್ಲಾಗುತ್ತಿರುವ ಬದಲಾವಣೆಗಳೇ ವೈರಲ್ ಜ್ವರಕ್ಕೆ ಕಾರಣ. ಮಳೆಗಾಲವಾದರೂ ಮಳೆ ಕಡಿಮೆಯಾಗಿ ಆಗಾಗ ಬಿಸಿಲು, ತಣ್ಣನೆ ವಾತಾವರಣ ಇರುವುದರಿಂದ ವೈರಲ್ ಜ್ವರ ಹೆಚ್ಚುತ್ತಿದೆ.

ಮೂರುನಾಲ್ಕು ದಿನಗಳಿಗೂ ಹೆಚ್ಚು ಕಾಲ ಜ್ವರ ಕಡಿಮೆಯಾಗದೆ ಇದ್ದಲಿ,್ಲ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಿರುವುದರಿಂದ ನಿರ್ಲಕ್ಷ್ಯ ವಹಿಸಬಾರದು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಮ್ಮಿದಾಗ ಹಳದಿ ಕಫ ಹೋಗುವುದು, ಶೀತದಿಂದ ಹಳದಿ ಸಿಂಬಳ ಬಂದಲ್ಲಿ ಬ್ಯಾಕ್ಟೀರಿಯಲ್ ಸೋಂಕು ಖಚಿತವಾಗುತ್ತದೆ. ಆಗ ಆ್ಯಂಟಿ ಬಯಾಟಿಕ್ ಔಷಧ ಅಗತ್ಯವಾಗಿರುತ್ತದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ವೈರಲ್ ಜ್ವರದಿಂದ ಚಳಿ ಜ್ವರದೊಂದಿಗೆ ಮೈಕೈ ನೋವು ಸಾಮಾನ್ಯ. ಆದರೆ ಇದನ್ನು ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳೆಂದು ತಿಳಿದು ಭಯ ಬೀಳುವ ಅಗತ್ಯವಿಲ್ಲ. ಸಾಮಾನ್ಯ ಜ್ವರವು ವೈರಸ್‍ನಿಂದ ಉಂಟಾಗುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಜ್ವರ ಮತ್ತು ಶೀತ ಬಾಧಿತ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.

ವೈರಲ್ ಫ್ಲೂ ಮಳೆಗಾಲದಲ್ಲಿ ಹರಡುವ ರೋಗ. ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಚಿಕಿತ್ಸೆಯಿಂದ ಬಳಲುವಿಕೆ ಕಡಿಮೆಯಾಗುತ್ತದೆ. ವಾತಾವರಣದಲ್ಲಿ ಬದಲಾವಣೆ ಉಂಟಾದಾಗ ಆರೋಗ್ಯದಲ್ಲಿ ಏರುಪೇರಾಗುತ್ತದೆ.
ವೈರಲ್ ಜ್ವರಕ್ಕೆ ಔಷಧ ಪಡೆಯಲು ನಗರದ ವಿವಿಧ ಆಸ್ಪತ್ರೆ, ಕ್ಲಿನಿಕ್‍ಗಳಲ್ಲಿ ರೋಗಿಗಳು ಹೆಚ್ಚಾಗಿ ಬರುತ್ತಿದ್ದಾರೆ.

ವಾತಾವರಣದ ಕಾರಣದಿಂದಾಗಿ ಈ ಸಮಯದಲ್ಲಿ ಜ್ವರ, ಶೀತ, ತಲೆನೋವು ಸಾಮಾನ್ಯವಾಗಿರುತ್ತದೆ. ಇದರ ಬಗ್ಗೆ ಜನ ಭಯ ಪಡುವ ಅಗತ್ಯವಿಲ್ಲ. ಆದರೆ ಯಾವುದೇ ಜ್ವರವನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತೆರಳಿ ಔಷಧ ಪಡೆದುಕೊಳ್ಳಬೇಕು.