ಪುತ್ತೂರು: 11ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವಕ್ಕೆ ನೂತನ ಉತ್ಸವ ಸಮಿತಿಯ ಆಯ್ಕೆಯು ಪುತ್ತೂರು ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್‍ನ ಸ್ಥಾಪನ ದಿನದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮ.
ಪುತ್ತೂರು ಮೊಸರು ಕುಡಿಕೆ ಉತ್ಸವದ 11ನೇ ವರ್ಷದ ಸಮಿತಿಯ ಅಧ್ಯಕ್ಷರಾಗಿ ಕಡಮಜಲು ಸುಭಾಷ್ ರೈಯವರು ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಜಯಂತ ಕುಂಜೂರುಪಂಜ ಹಾಗೂ ಕೋಶಾಧಿಕಾರಿಯಾಗಿ ವಿಶಾಕ್ ರೈ ಆಯ್ಕೆಯಾಗಿದ್ದಾರೆ.
ಹಾಗೆಯೇ ಸಮಿತಿಯ ಉಪಾಧ್ಯಕರುಗಳಾಗಿ ಉದ್ಯಮಿ ಜಯಂತ ನಡುಬೈಲು, ರತನ್ ಸಿಂಗ್, ಅರುಣ್ ಕುಮಾರ್ ರೈ ಅನಾಜೆ, ವಿನಯ ಆಚಾರ್ಯ ಹಾಗೂ ಸಹ ಕಾರ್ಯದರ್ಶಿಗಳಾಗಿ ಸೇಶಪ್ಪ ಬೆಳ್ಳಿಪ್ಪಾಡಿ, ಕಿರಣ್ ರಾಮಕುಂಜ, ಸಹ ಕೋಶಾಧಿಕಾರಿಯಾಗಿ ಪ್ರವೀಣ್ ಕಲ್ಲೇಗ ಆಯ್ಕೆಯಾಗಿದ್ದಾರೆ.
ಬಜರಂಗದಳದ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ, ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್, ಬಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ್ ಶ್ರೀಧರ್ ತೆಂಕಿಲ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ನ್ಯಾಯವಾದಿ ಪ್ರಮುಖ್ ಮಾಧವ ಪೂಜಾರಿ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ, ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್, ಬಜರಂಗದಳದ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೂಳ್ಪಾಡಿ ಉಪಸ್ಥಿತರಿದ್ದರು.
ಅಗಸ್ಟ್ 25ರಂದು ಪುತ್ತೂರು ಮೊಸರು ಕುಡಿಕೆ ಉತ್ಸವದ ಪೂರ್ವಭಾವಿಯಾಗಿ ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಹಾಗೂ ಪುತ್ತೂರ ಮುದ್ದು ಕೃಷ್ಣ ವೇಷ ಸ್ಪರ್ಧೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ವಠಾರದಲ್ಲಿ ನಡೆಯಲಿರುವುದು. ಹಾಗೂ ಪುತ್ತೂರು ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ಹಾಗೂ ಅಟ್ಟಿ ಮಡಿಕೆ ಒಡೆಯುವ ಆಕರ್ಷಕ ಶೋಭಯಾತ್ರೆಯು ಅಗಸ್ಟ್ 31 ರಂದು ನಡೆಯಲಿದೆ.