Thursday, January 23, 2025
ರಾಜಕೀಯ

ಮೈತ್ರಿ ಪಾಳಯಕ್ಕೆ ಆಘಾತದ ಸುದ್ದಿ – ಕಹಳೆ ನ್ಯೂಸ್

ಬೆಂಗಳೂರು: ಸರ್ಕಾರ ವಿಶ್ವಾಸ ಮತ ಯಾಚನೆಗೆ ಸಜ್ಜಾಗಿದ್ದು, ಇಂದು ಅಗ್ನಿ ಪರೀಕ್ಷೆ ಎದುರಾಗಿದೆ. ಈ ವೇಳೆ ಮೈತ್ರಿ ಪಾಳಯಕ್ಕೆ ಆಘಾತದ ಸುದ್ದಿ ಸಿಕ್ಕಿದೆ.

ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೆಂದ್ರ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವಿಶ್ವಾಸಮತ ಯಾಚನೆ ವೇಳೆ ಗೈರಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದನಕ್ಕೆ ಹಾಜರಾಗುವಂತೆ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮನವಿ ಮಾಡಿದ್ದು, ಇದುವರೆಗೂ ಕೂಡ ಅವರು ಯಾವುದೇ ನಿಲುವು ಪ್ರಕಟ ಮಾಡಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾಂಗ್ರೆಸ್‍ನ ಇನ್ನೊಬ್ಬ ಶಾಸಕ ಶ್ರೀಮಂತ್ ಪಾಟೀಲ್ ಬುಧವಾರ ರೆಸಾರ್ಟ್‍ನಿಂದ ತಪ್ಪಿಸಿಕೊಂಡು ತೆರಳಿದ್ದರು. ಈಗ ವಿಶ್ವಾಸ ಮತ ಯಾಚನೆಗೆ ಗೈರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ವಿಶ್ವಾಸ ಮತ ಯಾಚನೆ ಮೂಲಕ ಸರ್ಕಾರ ಉಳಿಸಲು ಪ್ರಯತ್ನಿಸುತ್ತಿರುವ ನಾಯಕರಿಗೆ ಇನ್ನಷ್ಟು ಆತಂಕ ಎದುರಾಗಿದೆ.