Thursday, January 23, 2025
ಸುದ್ದಿ

ಫಿಲೋಮಿನಾದಲ್ಲಿ ಕಮ್ಯೂನಿಕೇಟಿವ್ ಇಂಗ್ಲೀಷ್ ಸರ್ಟಿಫಿಕೇಟ್ ಕೋರ್ಸು ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲು ಭಾಷೆಯು ಪ್ರಮುಖ ಸಂಪರ್ಕ ಸಾಧನ. ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಲು ಆತ್ಮಸ್ಥೈರ್ಯ ಬಹಳ ಮುಖ್ಯ. ನಮ್ಮಲ್ಲಿ ಅಂತರ್ಗತವಾಗಿರುವ ಸಾಮಥ್ರ್ಯವನ್ನು ಸಂಪೂರ್ಣ ಬಳಕೆ ಮಾಡುವ ಮನೋಗುಣವಿದ್ದಾಗ ಸಾಧನೆ ಸುಲಭ ಎಂದು ಸುಳ್ಯ ಗಾಂಧಿನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ವಿಭಾಗದ ಉಪನ್ಯಾಸಕ ಅಬ್ದುಲ್ ಸಮಾದ್ ಕೆ ಎಸ್ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮತ್ತು ಗಣಕ ವಿಜ್ಞಾನ ವಿಭಾಗ ಇದರ ಆಶ್ರಯದಲ್ಲಿ ಜುಲೈ 17 ರಂದು ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಕಮ್ಯೂನಿಕೇಟಿವ್ ಇಂಗ್ಲೀಷ್ ಸರ್ಟಿಫಿಕೇಟ್ ಕೋರ್ಸು ಉದ್ಘಾಟಿಸಿ, ಮಾತನಾಡಿದರು. ಪ್ರಸ್ತುತ ಇಂಗ್ಲೀಷ್ ಭಾಷೆಗೆ ವಿಶ್ವದಲ್ಲಿಯೇ ಶ್ರೇಷ್ಠ ಸ್ಥಾನಮಾನವಿದೆ. ಇಂಗ್ಲೀಷ್ ಭಾಷಾಧ್ಯಯನವು ಕ್ಲಿಷ್ಟಕರ ಅನ್ನುವ ಭಾವನೆ ಜನರಲ್ಲಿದೆ. ಕಲಿಕೆಯ ಸಂದರ್ಭದಲ್ಲಿ ಅವಿರತ ಪ್ರಯತ್ನ ಮತ್ತು ಸಂಶಯಗಳನ್ನು ನಿವಾರಿಸಿಕೊಂಡು ಮುಂದುವರಿಯುವ ಛಲವಿದ್ದಾಗ ಭಾಷಾ ಪ್ರಯೋಗದಲ್ಲಿ ಹತೋಟಿ ಸಾಧಿಸಬಹುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಇಂಗ್ಲೀಷ್ ಒಂದು ವಿಶ್ವವ್ಯಾಪಿ ಭಾಷೆ. ಭಾಷೆಯಲ್ಲಿ ಪ್ರಾವಿಣ್ಯತೆಯಿದ್ದಾಗ ಸಂವಹನವು ಸುಲಲಿತವಾಗಬಲ್ಲುದು. ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಇಂಗ್ಲೀಷನ್ನು  ಪ್ರಥಮ ಭಾಷೆಯೆಂದು ಪರಿಗಣಿಸಲಾಗಿದೆ. ಆಲೈಸುವಿಕೆ, ಮಾತಾಡುವಿಕೆ, ಓದುವಿಕೆ ಮತ್ತು ಬರವಣಿಗೆ ಎಂಬ ಹಂತಗಳನ್ನು ಅನುಸರಿಸಿ, ಭಾಷಾ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದರು.

ಸರ್ಟಿಫಿಕೇಟ್ ಕೋರ್ಸು ಸಂಯೋಜಕಿ ನೋವೆಲಿನ್ ಫೆರ್ನಾಂಡಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್ ರೈ ಮತ್ತು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಉಪಸ್ಥಿತರಿದ್ದರು.

ರೂಪ ಮತ್ತು ತಂಡದವರು ಪ್ರಾರ್ಥಿಸಿದರು. ಚೇತನ ಸ್ವಾಗತಿಸಿ, ನಿಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ಕ್ಯಾರಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.