ಕೊಳಕೆ: ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ದಿವಾಕರ ಎಂಬವರ ತಾಯಿ ಬಾವಿಗೆ ಬಿದ್ದಾಗ ಮನೆಯಲ್ಲಿ ಗಂಡಸರು ಯಾರು ಇರಲಿಲ್ಲ. ದಿವಾಕರ ಅವರ ಮನೆಯಲ್ಲಿ ಬೊಬ್ಬೆ ಕೇಳಿದಾಗ ಅಲ್ಲಿಯೇ ಸಮೀಪ ಅಂಗಡಿಯಲ್ಲಿದ್ದ ಸಿದ್ದೀಕ್ ಕೊಳಕೆ ಅವರು ಮನೆಯತ್ತ ಧಾವಿಸಿದಾಗ, ಆಕಸ್ಮಿಕವಾಗಿ ಮಹಿಳೆ ಬಾವಿಗೆ ಬಿದ್ದದ್ದು ಗಮನಕ್ಕೆ ಬಂದಿದೆ. ಹಿಂದು ಮುಂದೆ ಯೋಚನೆ ಮಾಡದೆ, ಸಿದ್ದೀಕ್ ಬಾವಿಗೆ ಜಿಗಿದು ದಿವಾಕರ್ ಅವರ ತಾಯಿಯನ್ನು ಮೇಲೆತ್ತಿ ತುಂಬೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಮಹಿಳೆ ಅಪಾಯದಿಂದ ಪಾರಾಗಿದ್ದು, ಸಿದ್ದೀಕ್ ಅವರ ಸಮಯ ಪ್ರಜ್ಞೆ ಮತ್ತು ತನ್ನ ಜೀವದ ಹಂಗನ್ನು ತೊರೆದು ತಾಯಿಯನ್ನು ಕಾಪಾಡಿದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನೂ ಸಿದ್ದೀಕ್ ಮತ್ತು ದಿವಾಕರ ಅವರು ಸ್ನೇಹಿತರು. ಮಾನವ ಸಂಬಂಧ ಎಲ್ಲಾದಕ್ಕಿಂತ ದೊಡ್ಡದು ಎಂಬ ಮಾತು ಮತ್ತೆ ಸ್ಪಷ್ಟವಾಗಿದೆ.