Tuesday, January 21, 2025
ಸುದ್ದಿ

ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಮೋದಿ – ಕಹಳೆ ನ್ಯೂಸ್

ಇದುವರೆಗೆ ಎರಡೇ ಭಾಷೆಗಳಲ್ಲಿ ನಡೆಯುತ್ತಿದ್ದ ಅಂಚೆಪೇದೆ ನೇಮಕಾತಿ ಪರೀಕ್ಷೆ ಇನ್ನುಮುಂದೆ ಎಲ್ಲಾ ಪ್ರಾದೇಶಿಕ ಭಾಷೆಯಲ್ಲಿ ನಡೆಯಲಿದೆ. ಈ ಹಿಂದೆ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ನಡೆಸಲಾಗುತ್ತಿದ್ದ ಪರೀಕ್ಷೆ ಇನ್ನು ಕನ್ನಡ, ತಮಿಳು, ತೆಲುಗು ಹೀಗೆ ನಾನಾ ಭಾಷೆಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಚೆಪೇದೆ ನೇಮಕಾತಿ ಪರೀಕ್ಷೆಯನ್ನು ಕಳೆದ ಜುಲೈ.14ರಂದು ನಡೆಸಲಾಗಿತ್ತು. ಆದರೆ ಈ ಪರೀಕ್ಷೆಯಲ್ಲಿ ಹಿಂದಿ ಭಾಷೆ ಹೇರಿಕೆ ಮತ್ತು ಆಂಗ್ಲಾ ಭಾಷೆಯ ಸೆಳೆತವನ್ನು ಬಿಟ್ಟಿಲ್ಲ ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಕೇಂದ್ರದ ವಿರುದ್ಧ ಕಿಡಿ ಕಾರಿದ್ದವು. ಅಲ್ಲದೇ ಪ್ರಾದೇಶಿಕ ಭಾಷೆಯಲ್ಲಿಯೇ ಇಂತಹ ಪರೀಕ್ಷೆ ನಡೆಸುವಂತೆ ಒತ್ತಾಯಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡಿನ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಇದೀಗ, ಜುಲೈ.14ರಂದು ನಡೆದಿದ್ದ ಅಂಚೆಪೇದೆ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿ, ಪ್ರಾದೇಶಿಕ ಭಾಷೆಗಳಲ್ಲಿ ಮತ್ತೆ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ಇದೀಗ ಕನ್ನಡ, ತಮಿಳು ಸೇರಿದಂತೆ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಅಂಚೆಪೇದೆ ನೇಮಕಾತಿ ಪರೀಕ್ಷೆ ನಡೆಯಲಿದೆ. ಈ ಮೂಲಕ ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ನಮ್ಮ ಕನ್ನಡಿಗರಿಗೂ ದೊರೆತಂತಾಗಿದೆ.