Tuesday, January 21, 2025
ಸುದ್ದಿ

ಕೇಂದ್ರ ಸರ್ಕಾರದಿಂದ ರೈತರಿಗೆ ಶುಭ ಸುದ್ದಿ; ಒಂದು ಎಕರೆಯಿಂದ ಗಳಿಸಿ ವಾರ್ಷಿಕ 80,000 ಆದಾಯ – ಕಹಳೆ ನ್ಯೂಸ್

ರೈತರಿಗೆ ಸಣ್ಣ ಭೂಮಿ ಅಥವಾ ಇಳುವರಿ ನೀಡದ ಭೂಮಿಯಿದ್ದರೂ, ಆ ಭೂಮಿಯಿಂದಲೇ ಉತ್ತಮ ಆದಾಯ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಹೊಸದೊಂದು ಯೋಜನೆಯನ್ನು ಜಾರಿಗೆ ತರುವಲ್ಲಿ ಚಿಂತನೆ ನಡೆಸಿದೆ.

ಸಣ್ಣ ಪ್ರಮಾಣದ ಜಮೀನು ಅಥವಾ ಇಳುವರಿ ನೀಡದ ಜಮೀನಿನಿಂದ ಕನಿಷ್ಠ ಆದಾಯವನ್ನು ಪಡೆಯಲು ಸಾಧ್ಯವಿಲ್ಲದ ರೈತರಿಗೆ ಸರ್ಕಾರದ ಸೋಲಾರ್ ಫಾರ್ಮಿಂಗ್ ಯೋಜನೆ ವರದಾನವಾಗಲಿದೆ. ಸೋಲಾರ್ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಸರ್ಕಾರದ ಯೋಜನೆಗೆ ಈ ಯೋಜನೆ ಸಹಕಾರಿಯಾಗಲಿದೆ. ಸಣ್ಣ ಭೂಮಿ ಹೊಂದಿರುವ ರೈತರ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿ, ಅಲ್ಲಿ ಉತ್ಪಾದಿಸಲಾದ ವಿದ್ಯುತ್‍ನ್ನು ಸರ್ಕಾರ ಕೊಂಡುಕೊಳ್ಳುವ ಮೂಲಕ ಸರ್ಕಾರ ರೈತನಿಗೆ ವಾರ್ಷಿಕವಾಗಿ ಸುಮಾರು 80,000 ರೂಪಾಯಿಗಳಷ್ಟು ಲಾಭ ನೀಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಲಾರ್ ಫಾರ್ಮಿಂಗ್ ಯೋಜನೆಗೆ ಭೂಮಿ ನೀಡುವ ರೈತರು ಅದೇ ಜಾಗದಲ್ಲಿ ಸಣ್ಣ ಪುಟ್ಟ ಬೆಳೆಗಳನ್ನು ಕೂಡ ಬೆಳೆಯಬಹುದಾಗಿರುವುದರಿಂದ ರೈತರು ಭೂಮಿಯ ಸಂಪೂರ್ಣ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಇಂಧನ ಸಚಿವಾಲಯದ ಪ್ರಕಾರ ಒಂದು ಮೆಗಾ ವ್ಯಾಟ್ ಉತ್ಪಾದಿಸುವ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅಳವಡಿಸಲು 5 ಎಕರೆ ಭೂಮಿ ಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲ ಸೋಲಾರ್ ಪ್ಲಾಂಟ್ ವಾರ್ಷಿಕವಾಗಿ 11 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಒಂದು ಎಕರೆ ಭೂಮಿಯಲ್ಲಿ 0.20 ಮೆಗಾವ್ಯಾಟ್ ಉತ್ಪಾದಿಸಬಲ್ಲ ಪ್ಲಾಂಟ್ ಪ್ರಾರಂಭಿಸಬಹುದು. ಕುಸುಮ್ ಯೋಜನೆಯ ಅಡಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವ ಡೆವೆಲಪರ್ಸ್‍ಗಳು ರೈತರಿಗೆ ಪ್ರತಿ ಯುನಿಟ್‍ಗೆ 30 ಪೈಸೆಯಂತೆ ಭೂಮಿಗೆ ಬಾಡಿಗೆ ನೀಡುತ್ತಾರೆ. ಇದರಿಂದ ಭೂಮಿಯ ಮೇಲಿನ ಸಂಪೂರ್ಣ ಹಕ್ಕು ರೈತನದ್ದೇ ಆಗಿರುತ್ತದೆ.

ಸರ್ಕಾರದ ಈ ಹೊಸ ಯೋಜನೆಯಿಂದ ರೈತರಿಗೆ ವಾರ್ಷಿಕವಾಗಿ ಕನಿಷ್ಠ 80,000 ವೇತನ ಲಭ್ಯವಾಗುತ್ತದೆ ಮತ್ತು, ತನ್ನದೇ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಜೊತೆಗೆ ಬೇರೆ ಸಣ್ಣ ಪುಟ್ಟ ಬೆಳೆ ಬೆಳೆದು ಲಾಭ ಪಡೆದುಕೊಳ್ಳುವ ಅವಕಾಶವೂ ಸಿಗುತ್ತದೆ.