Tuesday, January 21, 2025
ಸುದ್ದಿ

ಹಗಲು ದರೋಡೆ ನಡೆಸಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿದ ಬಜಪೆ ಪೊಲೀಸರು – ಕಹಳೆ ನ್ಯೂಸ್

ಬಜಪೆ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಯಲ್ಲಿ ನಡೆದ ಹಗಲು ದರೋಡೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೆಂಥಿಲ್ ಕುಮಾರ್ ಎಂಬವರು ಸಣ್ಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು, ಇವರು ಮಂಗಳೂರು ತಾಲೂಕು, ಮೊಗರು ಗ್ರಾಮದ, ಮಳಲಿ ಸೈಟ್ ಬಳಿ ಹೋಗುತ್ತಿರುವಾಗ ಎರಡು ಬೈಕ್‍ನಲ್ಲಿ ನಾಲ್ಕು ಯುವಕರು ಬಂದಿದ್ದಾರೆ. ಸೆಂಥಿಲ್ ಕುಮಾರ್‍ ರವರ ಬೈಕಿಗೆ ಅಡ್ಡಗಟ್ಟಿ ಅವರಲ್ಲಿದ್ದ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಕೊಲ್ಲುತ್ತೇವೆ ಎಂದು ತಲವಾರು ತೋರಿಸಿ ಬೆದರಿಸಿ ಬೈಕಿನ ಬಾಕ್ಸನ್ನು ಒಡೆದು ಅದರಲ್ಲಿದ್ದ 2,05.000 ರೂಪಾಯಿ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳನ್ನು ಅಬ್ದುಲ್ ಅಜೀಜ್, ಮಹಮ್ಮದ್ ಮುಸ್ತಾಫ, ಆಶ್ಲೇಷ್ ಎ ಕೋಟ್ಯಾನ್ ಎಂದು ಗುರುತಿಸಲಾಗಿದ್ದು ಆರೋಪಿಗಳಿಂದ 21,800 ನಗದು, ದರೋಡೆ ಮಾಡಲು ಉಪಯೋಗಿಸಿದ ಬಜಾಜ್ ಡಿಸ್ಕವರ್ ಮೋಟಾರು ಸೈಕಲ್- 1, ಮೂರು ಮೊಬೈಲ್, ತಲವಾರು, ಚೂರಿಯನ್ನು ವಶಕ್ಕೆ ಪಡೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು