Tuesday, January 21, 2025
ಸಿನಿಮಾ

“ಪೆನ್ಸಿಲ್ ಬಾಕ್ಸ್” ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡ “ಲಹರಿ” ಸಂಸ್ಥೆ – ಕಹಳೆ ನ್ಯೂಸ್

ದೃಶ್ಯ ಮೂವೀಸ್ ಬ್ಯಾನರಿನಲ್ಲಿ ನಿರ್ಮಾಣಗೊಂಡ ಡಾನ್ಸ್ ಡಾನ್ಸ್ ಜೂನಿಯರ್ ಖ್ಯಾತಿಯ ದೀಕ್ಷಾ ಡಿ ರೈ ಅಭಿನಯದ ಪೆನ್ಸಿಲ್ ಬಾಕ್ಸ್ ಚಿತ್ರ ಶೀಘ್ರದಲ್ಲೇ ತೆರೆ ಕಾಣಲಿದೆ. ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಲಹರಿ ಸಂಸ್ಥೆಯು ಪಡೆದುಕೊಂಡಿದ್ದು ಚಿತ್ರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಒಟ್ಟು ಮೂರು ಹಾಡುಗಳಿದ್ದು ಸರಿಗಮಪ ಖ್ಯಾತಿಯ ಡಾ.ಅಭಿಷೇಕ್, ವೈಷ್ಣವಿ ರವಿ, ಕ್ಷಿತಿ ಕೆ ರೈ ಧರ್ಮಸ್ಥಳ, ಅಪೇಕ್ಷಾ ಪೈ, ಜನ್ಯ ಪ್ರಸಾದ್, ಶಿವಾನಿ ಕೊಪ್ಪ ಮುಂತಾದವರು ಧ್ವನಿ ನೀಡಿದ್ದಾರೆ. ರಝಾಕ್ ಪುತ್ತೂರು ಬರೆದ ಅರ್ಥಪೂರ್ಣವಾದ ಸಾಹಿತ್ಯಕ್ಕೆ ಜಯಕಾರ್ತಿಯವರು ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದೇ ಜುಲೈ 29ರಂದು ಶ್ರೀ ಗುರುದೇವಾನಂದ ಸ್ವಾಮಿ ಶ್ರೀ ಕ್ಷೇತ್ರ ಒಡಿಯೂರು ಇಲ್ಲಿ ಶ್ರೀ ಸ್ವಾಮಿಗಳ ಆಶೀರ್ವಾದದೊಂದಿಗೆ ಪೆನ್ಸಿಲ್ ಬಾಕ್ಸ್ ಚಿತ್ರದ ಹಾಡುಗಳು ಲೋಕಾರ್ಪಣೆಗೊಳ್ಳಲಿದ್ದು ಸಂಗೀತ ಪ್ರಿಯರನ್ನು ಮೋಡಿ ಮಾಡಲಿದೆ. ದಯಾನಂದ್ ಎಸ್ ರೈ ಬೆಟ್ಟಂಪಾಡಿ ನಿರ್ಮಾಣದ ಪೆನ್ಸಿಲ್ ಬಾಕ್ಸ್ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ರಝಾಕ್ ಪುತ್ತೂರು ಇವರದ್ದು.

ಜಾಹೀರಾತು

ಜಾಹೀರಾತು
ಜಾಹೀರಾತು