ಚಿಕ್ಕಮಗಳೂರು: ಭಯೋತ್ಪಾದನೆ ರೀತಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಭಯ ಸೃಷ್ಟಿಸುವುದೇ ಭಯೋತ್ಪಾನೆ ಅಂತ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಭಯೋತ್ಪಾದನೆ ರೀತಿಯಲ್ಲಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ. ಯಾಕಂದ್ರೆ ಅವರ ಮಾತಿನಲ್ಲಿ ಬೆದರಿಕೆ ಇದೆ. ದಾಸ್ಯ ಇದೆ. ದುರಹಾಂಕಾರ ಇದೆ. ನಾವು ಯಾವತ್ತು ದುರಹಾಂಕಾರ ಮಾತು ಆಗಲಿ, ಬೆದರಿಕೆ ರೀತಿ ಮಾತಾನಾಡಿಲ್ಲ ಅಂದ್ರು.
ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂದ್ರೆ ಹೇಗೆ? ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂತಾ ಕರೆಯೋದಕ್ಕೆ ಯಾವ ಡಿಕ್ಷನರಿ ಓದಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಭಯೋತ್ಪಾದನೆ ಅನ್ನೋದಕ್ಕೆ ಡಿಕ್ಷನರಿ ಬೇರೆ ಅರ್ಥ ಅದನ್ನ ರಾಮಲಿಂಗಾರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡೋ ಸಿಎಂ ಕೂಡ ಓದಿಕೊಳ್ಳಲಿ ಅಂತ ಟಾಂಗ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ತಾಲಿಬಾಲ್ ಹಾಗೂ ನಕ್ಸಲ್ ಜೊತೆ ನಂಟು ಇಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಯಾವತ್ತು ಉಗ್ರ ಆಗೋಕೆ ಸಾಧ್ಯವಿಲ್ಲ. ಹಿಂದೂ ಹಾಗೊಮ್ಮೆ ಹೀಗೊಮ್ಮೆ ವ್ಯಾಘ್ರವಾಗಬಹುದು ಆದ್ರೆ ಉಗ್ರ ಆಗೋಕೆ ಸಾಧ್ಯವಿಲ್ಲ ಅಂತ ಅವರು ಹೇಳಿದ್ದಾರೆ.