ವಾಷಿಂಗ್ಟನ್: ಭಾರತದೊಂದಿಗೆ ಅಮೆರಿಕ ಉತ್ತಮ ರಕ್ಷಣಾ ಬಾಂಧವ್ಯ ಬಲವರ್ಧನೆಯನ್ನು ಬಯಸುತ್ತದೆ ಎಂದು ಪುನರುಚ್ಚರಿಸಿರುವ ಅಮೆರಿಕ, ರಷ್ಯಾದಿಂದ ಅತ್ಯಂತ ಪ್ರಬಲ ಎಸ್-400 ಕ್ಷಿಪಣಿ ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಭಾರತದ ವಿರುದ್ಧ ಮತ್ತೊಮ್ಮೆ ಗರಂ ಆಗಿದೆ.
ಭಾರತ ಸೇರಿದಂತೆ ಯಾವುದೇ ದೇಶ ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಸುವುದಕ್ಕೆ ತಾನು ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಅಮೆರಿಕ ರಕ್ಷಣಾ ಇಲಾಖೆ-ಪೆಂಟಗನ್ ಹೇಳಿದೆ.
ಉಪ ಅಧೀನ ಕಾರ್ಯದರ್ಶಿ ಡೇವಿಡ್ ಜೆ.ಟ್ರಷ್‍ಟಿಂಗ್‍ಟನ್ ಭಾರತದೊಂದಿಗೆ ಅಮೆರಿಕ ಯಾವಾಗಲೂ ಉತ್ತಮ ರಕ್ಷಣಾ ಬಾಂಧವ್ಯ ಹೊಂದಲು ಬಯಸುತ್ತದೆ. ಆದರೆ, ಅದು ರಷ್ಯಾದಿಂದ ಅತ್ಯಂತ ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಒಡಂಬಡಿಕೆ ಮಾಡಿಕೊಂಡಿರುವುದು ವಾಷಿಂಗ್ಟನ್‍ಗೆ ಅಸಮಾಧಾನವಾಗಿದ್ದು, ಈ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
ಭಾರತ ಅಕ್ಟೋಬರ್ ನಲ್ಲಿ ರಷ್ಯಾದೊಂದಿಗೆ 40,000 ಕೋಟಿ ರೂ. ವೆಚ್ಚದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಲು ಒಪ್ಪಂದಕ್ಕೆ ಸಹಿ ಹಾಕಿತ್ತು.
ಅಮೆರಿಕದ ಅತ್ಯಂತ ಶಕ್ತಿಶಾಲಿ ಸಮರ ವಿಮಾನಗಳನ್ನು ಹೊಡೆದುರುಳಿಸುವ ಸಾಮಥ್ರ್ಯವನ್ನು ಎಸ್-400 ಕ್ಷಿಪಣಿಗಳು ಹೊಂದಿರುವುದೇ ಅಮೆರಿಕದ ಈ ವಿರೋಧಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.